Friday, September 20, 2024
ದಕ್ಷಿಣ ಕನ್ನಡಪುತ್ತೂರು

” ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದೇ ಯೋಧರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ” – ವಿಶ್ವಹಿಂದೂ ಪರಿಷತ್ತು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಆಗ್ರಹ – ಕಹಳೆ ನ್ಯೂಸ್

ಪುತ್ತೂರು: ಭಾರತದ ಗಡಿಯಲ್ಲಿ ವಿನಃ ಕಾರಣ ತಗಾದೆ ತೆಗೆಯುತ್ತಿರುವ ಚೀನಾಕ್ಕೆ ನಮ್ಮ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ಈ ಘರ್ಷಣೆಯಲ್ಲಿ ನಮ್ಮ 20 ಯೋಧರ ಬಲಿದಾನವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಚೀನಾದ ಸರಕು, ವಸ್ತುಗಳನ್ನು ಬಹಿಷ್ಕರಿಸುವುದೇ ಯೋಧರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಹೇಳಿದರು.

ಅವರು ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನಾಪಡೆ ವಿರುದ್ಧ ನಡೆದ ಸಂಘರ್ಷದ ವೇಳೆ ಹುತಾತ್ಮರಾದ 20 ಭಾರತೀಯ ಯೋಧರಿಗೆ ಜೂ.17ರಂದು ಪುತ್ತೂರಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ವಿಹಿಂಪ ಮತ್ತು ಬಜರಂಗದಳದ ನೇತೃತ್ವದಲ್ಲಿ ನಡೆದ ನಮನ ಕಾರ್ಯಕ್ರಮದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ಭದ್ರತೆಯ ವಿಷಯಕ್ಕೆ ಬಂದಾಗ ಭಾರತೀಯರು ಸಂಘಟಿತ ಹೋರಾಟ ಮಾಡುತ್ತೇವೆ.ಭಾರತದ ಸಾರ್ವಭೌಮತೆ ಹಾಗೂ ಸೈನಿಕ ಸಾಮರ್ಥ್ಯ ಹಿಂದಿನಂತೆ ಇಲ್ಲ.1964ರ ಭಾರತ ಬಹಳ ಬದಲಾಗಿದೆ. ದೇಶದ ಭದ್ರತೆಗೆ ಧಕ್ಕೆ ಎದುರಾದರೆ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ ಅವರು ನಾವೆಲ್ಲ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದರು.

ಜಾಹೀರಾತು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ್ ಶ್ರೀಧರ್ ತೆಂಕಿಲ. ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜಿತೇಶ್ ಬಲ್ನಾಡ್, ಬಜರಂಗದಳ ಪುತ್ತೂರು ಪ್ರಖಂಡ ಸಹ ಸಂಚಾಲಕ ಜಯಂತ್ ಕುಂಜೂರುಪಂಜ, ಪ್ರಖಂಡ ಸಾಪ್ತಾಹಿಕ ಮಿಲನ್ ಪ್ರಮುಖ್ ವಿಶಾಕ್ ಸಸಿಹಿತ್ಲು, ಬಜರಂಗದಳ ನಗರ ಸಹ ಸಂಚಾಲಕ್ ಚೇತನ್ ಬೊಳ್ವಾರ್, ನಗರ ಅಖಾಡ ಪ್ರಮುಖ್ ಹರ್ಷಿತ್ ಬಲ್ನಾಡ್, ಬಜರಂಗದಳ ಇರ್ದೆ ಘಟಕ ಸಂಚಾಲಕ ಧನಂಜಯ ಇರ್ದೆ, ವಿಶ್ವ ಹಿಂದೂ ಪರಿಷತ್ ಇರ್ದೆ ಘಟಕ ಕಾರ್ಯದರ್ಶಿ ಅನಿಲ್ ಇರ್ದೆ ಹಾಗೂ ಕಾರ್ಯಕರ್ತರಾದ ಸಚಿನ್ ಅಮ್ಮುಂಜೆ, ಕೃತಿಕ್ ಬಲ್ನಾಡ್ ಉಪಸ್ಥಿತರಿದ್ದರು.