Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಹುಟ್ಟೂರಿಗೆ ಬಂದ ಯೋಧ ಸಂದೇಶ್ ಶೆಟ್ಟಿ ಪಾರ್ಥಿವ ಶರೀರ ; ಶಾಸಕ ಹರೀಶ್ ಪೂಂಜ ಸೇರಿದಂತೆ ಗಣ್ಯರಿಂದ ನಮನ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಾಯ..! – ಕಹಳೆ ನ್ಯೂಸ್

ಬೆಳ್ತಂಗಡಿ: ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಯೋಧ ಸಂದೇಶ್ ಶೆಟ್ಟಿ ಅವರು ಪಾರ್ಥಿವ ಶರೀರ ಇಂದು ಸಂಜೆ ಸ್ವ ಗ್ರಾಮ ಬಾರ್ಯಕ್ಕೆ ತರಲಾಯಿತು.

ಯೋಧ ಸಂದೇಶ್ ಶೆಟ್ಟಿಯವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಹಾಗೂ ಸೈನ್ಯ ಗೌರವಗಳನ್ನು ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸ್ಥಳೀಯಾಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾರ್ಯಾದ ನಿವಾಸಿಯಾಗಿರುವ ಸಂದೇಶ್ ಶೆಟ್ಟಿ ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇತ್ತೀಷೆಗಷ್ಟೇ ರಜೆ ಮೇಲೆ ಊರಿಗೆ ಬಂದು ಕರ್ತವ್ಯಕ್ಕೆ ತೆರಳಿದ್ದರು.

ಮಥುರಾದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆ ಸಂದರ್ಭ ಹೃದಯಾಘಾತದಿಂದ ಸಾವಿಗೀಡಾಗಿದ್ದರು.