Sunday, January 19, 2025
ಉಡುಪಿಸುದ್ದಿ

ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಯಶಸ್ವಿ ಹೆರಿಗೆ ಮಾಡಿದ ಉಡುಪಿಯ ವೈದ್ಯರು ; ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು..! – ಕಹಳೆ ನ್ಯೂಸ್

ಉಡುಪಿ: ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಯಶಸ್ವಿಯಾಗಿ ಹೆರಿಗೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯ ಟಿಎಂಎಪೈ ಆಸ್ಪತ್ರೆಯಲ್ಲಿ 22 ವರ್ಷದ ತುಂಬು ಗರ್ಭಿಣಿಗೆ ವೈದ್ಯರು ಹೆರಿಗೆ ಮಾಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಗರ್ಭಿಣಿಯು ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಬಾಣಂತಿ ಮಗು ಆರೋಗ್ಯವಾಗಿದ್ದಾರೆ.

ಇನ್ನು ಇದು ರಾಜ್ಯದ ಇತಿಹಾಸದಲ್ಲಿ ಪ್ರಥಮ ಸಿಜೇರಿಯನ್ ಹೆರಿಗೆಯಾಗಿದ್ದು, ಬಾಣಂತಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋವಿಡ್ ಆಸ್ಪತ್ರೆ ವೈದ್ಯ ಡಾ. ಶಶಿಕಿರಣ್ ಮಾಹಿತಿ ನೀಡಿದ್ದಾರೆ.