Sunday, January 19, 2025
ಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆದ ದ್ವಿತೀಯ ಪಿಯುಸಿಯ ಆಂಗ್ಲಪರೀಕ್ಷೆ-ಕಹಳೆ ನ್ಯೂಸ್

ಪುತ್ತೂರು: ಕೋರೊನಾದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಪರಿಣಾಮವಾಗಿ ಬಾಕಿ ಉಳಿದ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯೂ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು. ಒಟ್ಟು 836 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದು ಅದರಲ್ಲಿ 18 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಸುಮಾರು 104 ವಿದ್ಯಾರ್ಥಿಗಳು ಅವರವರ ಜಿಲ್ಲೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 39 ಕೊಠಡಿಗಳಲ್ಲಿ ಪರೀಕ್ಷೆಯು ನಡೆದಿತ್ತು. ಅಲ್ಲದೇ ಎಲ್ಲಾ ತರಗತಿ ಕೊಠಡಿಗಳಿಗೆ, ಹೊರಾಂಗಣಗಳಿಗೆ ಸ್ಯಾನಿಟೈಸರ್‌ನ್ನು ಯಂತ್ರದ ಮೂಲಕ ಸಿಂಪಡಿಸಿ ಮೊದಲೇ ಶುದ್ದಿಗೊಳಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪರೀಕ್ಷಾ ಕೇಂದ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಪರೀಕ್ಷಾ ಮೇಲ್ವಿಚಾರಕರು ಮಾಸ್ಕ್ ಧರಿಸಿಕೊಂಡೆ ಪರೀಕ್ಷೆಯನ್ನು ಬರೆದಿದ್ದರು. ಪರೀಕ್ಷೆ ಆರಂಭದ ಮೊದಲು ಪ್ರತಿಯೊಬ್ಬ ವಿದ್ಯಾರ್ಥಿಯ ಥರ್ಮಲ್ ಸ್ಕಿನಿಂಗ್ ಮಾಡಿ ಸಾಮಾಜಿಕ ಅಂತರವನ್ನು ಪ್ರತಿಯೊಂದು ಸಂದರ್ಭದಲ್ಲಿ ಕೈಗೊಳ್ಳಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ 10.15 ರಿಂದ 1.30 ರವರೆಗೆ ಇರುವ ಪರೀಕ್ಷೆಗೆ ನಿಗದಿತ ಸಮಯಕ್ಕೂ ಮೊದಲೇ ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು.ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಕೊಡದೆ ಸುಸೂತ್ರವಾಗಿ ನಡೆಯುವ ರೀತಿಯಲ್ಲಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.