ಮುಂಬೈ, ಜೂನ್ 18: ಭಾರತ ಚೀನಾ ಗಡಿ ವಿವಾದ ತಾರಕಕ್ಕೇರಿರುವ ಹೊತ್ತಿನಲ್ಲಿ ಚೀನಾ ವಸ್ತುಗಳನ್ನು ಭಾರತದಲ್ಲಿ ನಿಷೇಧ ಮಾಡಬೇಕು ಎಂಬ ಕೂಗು ಬಲವಾಗಿದೆ. ಇದಕ್ಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಚೈನೀಸ್ ಪುಡ್‌ನ್ನೇ ಭಾರತದಲ್ಲಿ ಮಾರುವುದನ್ನು, ತಿನ್ನುವುದನ್ನು ನಿಷೇಧ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಭಾರತ ಚೀನಾ ಗಡಿ ವಿವಾದದ ಕುರಿತು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ”ಭಾರತದಲ್ಲಿ ಚೀನಿ ಆಹಾರವನ್ನು ಮಾರಾಟ ಮಾಡುವ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಮುಚ್ಚಬೇಕು. ಚೀನಿ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ, ಬಹಿಷ್ಕರಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದಿದ್ದಾರೆ.
”ನಮ್ಮ 20 ಸೈನಿಕರನ್ನು ಕೊಂದು ಚೀನಾ ನಮಗೆ ಅಗೌರವ ತೋರಿರುವ ಈ ಸಮಯದಲ್ಲಿ, ಭಾರತೀಯರೆಲ್ಲರೂ ಚೀನಿ ಆಹಾರವನ್ನು ತಿನ್ನುವುದನ್ನು ನಿಲ್ಲಿಸಬೇಕು. ಚೀನಿ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳನ್ನು ನಿಷೇಧಿಸಲು ಎಲ್ಲಾ ರಾಜ್ಯಗಳು ಆದೇಶ ನೀಡಬೇಕು” ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ.