Sunday, January 19, 2025
ಅಂಕಣಆರೋಗ್ಯ

” ಕ್ರೋಸ್ ಟ್ರೈನರ್ ” ಏನಿದು ಗೊತ್ತಾ…? ಇದರ ಪ್ರಯೋಜನ ಕೇಳಿದ್ರೆ ನೀವೂ ಶಾಕ್ ಆಗ್ತೀರಾ..!? ಈ ಲೇಖನ ಓದಿ – ಕಹಳೆ ನ್ಯೂಸ್

ಲೇಖನ: ಕೃಷ್ಣವೇಣಿ ಪ್ರಸಾದ್ ಮುಳಿಯ

ಎಸ್, ಇದೊಂದು ಜಿಮ್‍ನಲ್ಲಿರುವ ಬೈಕ್‍ನ್ನು ಹೋಲುವ ಯಂತ್ರ. ಆದರೆ, ಕುಳಿತು ಕೊಳ್ಳದೆ ಮೆಟ್ಟಿಲು ಹತ್ತುವ, ನಡೆಯುವ ಓಡುವ ಅನುಭವ ದೊರಕಿ ದೇಹಕ್ಕೆ ಹಾನಿಯಾಗದಂತೆ ರೂಪಿಸಿದ ಒಂದು ಸುಂದರ ವ್ಯಾಯಾಮಕ್ಕೆ ಉಪಯೋಗಿಸುವ ಯಂತ್ರ. ಇದನ್ನು ಮಹಿಳೆಯರಿಗಾಗಿ ತಯಾರು ಮಾಡಲಾಗಿದೆ ಎನ್ನಬಹುದು. ಇದರಲ್ಲಿನ ವ್ಯಾಯಾಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಹಾನಿಯನ್ನು ಮಾಡುವುದಿಲ್ಲ. ಇದು ಆರೋಗ್ಯ, ತೂಕ ಇಳಿಕೆ, ಓಟಗಾರರಿಗೆ, ಕುಳಿತೇ ಕೆಲಸ ಮಾಡುವವರಿಗೆ ಎಲ್ಲದಕ್ಕೂ
ಸರಿಹೊಂದುವ ಒಂದು ಯಂತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಉಪಯೋಗಿಸೋದು ಹೇಗೆ..?

ಜಾಹೀರಾತು
ಜಾಹೀರಾತು
ಜಾಹೀರಾತು
  • 1. ಮೊದಲಿಗೆ ನಮ್ಮ ತೂಕವನ್ನು ಯಂತ್ರದಲ್ಲಿ ಸೆಟ್ ಮಾಡಿ
    ಸರಿಯಾದ ಚಲನೆಯನ್ನು ಯಂತ್ರದಲ್ಲಿ ಅಳವಡಿಸಿ ಸರಿ
    ಹೊಂದಿಸಬೇಕು.
  • 2. ನಮ್ಮ ಆಸಕ್ತಿಯನ್ನು ಪರಿಗಣಿಸಿಕೊಂಡು ತೂಕ
    ಇಳಿಕೆಯೇ, ಶಕ್ತಿ ವರ್ಧನೆಯೇ, ಸ್ಟೆಮಿನಾ(ತ್ರಾಣ ವರ್ಧನೆ)
    ಬಿಲ್‍ಡಪ್ ಮಾಡಲೇ ಪರಿಗಣಿಸಿ ಹೊಂದಿಸಿಕೊಳ್ಳಬೇಕು.
  • 3. ನಮ್ಮ ಶಕ್ತಿ ಮತ್ತು ತೂಕಕ್ಕೆ ಅನುಗುಣವಾಗಿ
    ಯಂತ್ರ ವೇಗವನ್ನು ಹೊಂದಿಕೆ ಮಾಡಿಕೊಳ್ಳಬೇಕು.
  • 4. ಕೊನೆಯಲ್ಲಿ ಎಷ್ಟು ಸಮಯ ಎಂದು ತರಬೇತುದಾರನ
    ನಿರ್ದೇಶನದ ಮೇರೆಗೆ ಹೊಂದಿಕೆ ಮಾಡಿಕೊಳ್ಳಬೇಕು.
  • 5. ಪ್ರೋಗ್ರಾಮ್‍ಗಳ ಸೆಟ್ ಆದ ಮೇಲೆಯೇ ಸ್ಟಾರ್ಟ್
    ಸ್ವಿಚ್‍ನ್ನು ಒತ್ತಬೇಕು. ತರಬೇತುದಾರರು ಮಾಹಿತಿ ನೀಡಿದ
    ಪ್ರಕಾರ 20 ನಿಮಿಷ 30 ನಿಮಿಷ 1.30 ಗಂಟೆ ಅಭ್ಯಾಸ
    ಮಾಡಬೇಕು.
  • 6. ಗಮನದಲ್ಲಿರಲಿ ವರ್ಕ್‍ಔಟ್ ಮಾಡುವಾಗ ಕಾಲಿನ ಹಿಮ್ಮಡಿ
    ಯಾವುದೇ ಕಾರಣಕ್ಕೂ ಎದ್ದೇಳಬಾರದು ಯಾಕೆಂದರೆ
    ಮಂಡಿಯ ಚಿಪ್ಪು ಸವೆಯುವ/ನೋಯುವ ಸಾಧ್ಯತೆ
    ಇರುತ್ತದೆ ಅಲ್ಲದೆ ಡಿಸ್ಕ್ ನೋವು ಉಂಟಾಗುವ ಸಾದ್ಯತೆ
    ಹೆಚ್ಚು.
  • 7. ಅವರವರ ಅನುಭವಕ್ಕೆ ಅನುಗುಣವಾಗಿ ರಿಪಿಟೇಶನ್ ಪರ್
    ಮಿನಿಟ್(ಖಖಒ) ಲೆವೆಲ್‍ನ್ನು ಸರಿದೂಗಿಸಿಕೊಂಡು ವರ್ಕ್‍ಔಟ್ ಮಾಡಿದಲ್ಲಿ ಉತ್ತಮ ಫಲ ಲಭ್ಯ.
  • 8. ನೆನಪಿರಲಿ ಮೂವ್‍ಮೆಂಟ್ ಆಗುವ ಹ್ಯಾಂಡಲ್ ಹಿಡಿದು ಅಭ್ಯಾಸ ಮಾಡಿ.

ಕ್ರೋಸ್ ಟ್ರೈನರ್‍ನಲ್ಲಿ ವ್ಯಾಯಾಮ
ಮಾಡುವುದರಿಂದ ನಮ್ಮ ಶರೀರಕ್ಕೆ ಆಗುವ ಪ್ರಯೋಜನಗಳು :

  • 1. ಇದು ಶರೀರದ ಕೊಬ್ಬಿನ ಅಂಶವನ್ನು ವೇಗವಾಗಿ (ಕಡಿಮೆ
    ಅವಧಿ) ಕಡಿಮೆಗೊಳಿಸುತ್ತದೆ.
  • 2. ನಿಮ್ಮ ಎಲುಬಿನ ಜೋಯಿಂಟನ್ನು ಸಧೃಢಗೊಳಿಸುತ್ತದೆ.
  • 3. ಇಡೀ ಶರೀರಕ್ಕೆ ವ್ಯಾಯಾಮದ ಅನುಭವವಾಗುತ್ತದೆ.
  • 4. ಸರಿಯಾದ ಕ್ರಮದಲ್ಲಿ ಮಾಡಿದರೆ ಶರೀರಕ್ಕೆ
    ಗಾಯಗಳಾಗುವುದನ್ನು ತಡೆದು ಒಳ್ಳೆಯ ವ್ಯಾಯಾಮ
    ನೀಡುತ್ತದೆ.
  • 5. ಶರೀರ ಬಲ ವೃದ್ಧಿಯಾಗುತ್ತದೆ.
  • 6. ಈ ಯಂತ್ರಕ್ಕೆ ಸಣ್ಣ ಸ್ಥಳವಕಾಶ ಸಾಕು ಮನೆಯಲ್ಲೇ
    ಇಟ್ಟುಕೊಳ್ಳಬಹುದು(7*4=28 ಅಡಿಗಳ ಜಾಗ ಸಾಕು.)
  • 7. ತೂಕ ಇಳಿಕೆ ಕ್ರಮಬದ್ಧವಾಗಿ ಉಂಟಾಗುತ್ತದೆ.

ವಯಸ್ಸು, ಆರೋಗ್ಯ, ನಮ್ಮ ಶಕ್ತಿಯನ್ನು ಹೊಂದಿಕೊಂಡು ವ್ಯಾಯಾಮ ಮಾಡಬೇಕು. ಯಾಕೆಂದರೆ, ಸರಿಯಾದ ರೀತಿಯಲ್ಲಿ ನಮಗೆ ಫಲ ಸಿಗಬೇಕಾದರೆ
ಸರಿಯಾದ ರೀತಿಯ ವ್ಯಾಯಾಮದ ರೀತಿ ಬಹು ಮುಖ್ಯ ಎಷ್ಟು ಸಮಯ ಯಾವ ಯಂತ್ರದಲ್ಲಿ ಯಾವ ರೀತಿಯಾಗಿ, ಯಾವ ಆಹಾರ ತೆಗೆದುಕೊಂಡು ಮಾಡಬೇಕು ಎಂದು ಉತ್ತಮ ಜಿಮ್ ನಿರ್ದೇಶಕರಲ್ಲಿ ಮಾಹಿತಿಯನ್ನು ಪಡೆದು ಮಾಡುವುದು ಉತ್ತಮ ಫಲ ಮತ್ತು ಆರೋಗ್ಯದ
ದೃಷ್ಟಿಕೋನದಿಂದಲೂ ಒಳ್ಳೆಯದು.

ವಿಷಯ: ಹೆಲ್ತ್ & ಫಿಟ್‍ನೆಸ್ ಸರ್ಟಿಫೈಡ್ ಎಕ್ಸ್‍ಪರ್ಟ್

ತರಬೇತುದಾರ : ಶ್ರೀ. ಕೃಷ್ಣ, ಪುತ್ತೂರು