Friday, September 20, 2024
ದಕ್ಷಿಣ ಕನ್ನಡಪುತ್ತೂರು

ಪುತ್ತೂರಿನಲ್ಲಿ ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಆಕ್ರೋಶ ; ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ ವಿದ್ಯಾರ್ಥಿ ಶಕ್ತಿ – ಕಹಳೆ ನ್ಯೂಸ್

ಪುತ್ತೂರು: ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಜತೆಗಿನ ಗಡಿ ಸಂಘರ್ಷದಲ್ಲಿ ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಪುತ್ತೂರಿನಲ್ಲೂ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಜೊತೆಗೆ ಜೂ. 18ರಂದು ಮುಸ್ಸಂಜೆ ಇಲ್ಲಿನ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಎದುರು ಎಬಿವಿಪಿ ಕಾರ್ಯಕರ್ತರು ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.


ಸಂಘಪರಿವಾರದ ಹಿರಿಯ ಕಾರ್ಯಕರ್ತ ಚಂದ್ರಶೇಖರ್ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ ದೇಶದ ಬದಲಾವಣೆ ಅನಿವಾರ್ಯ ಎಂದಾಗ ತರುಣ ಶಕ್ತಿ ಅತ್ಯಂತ ಪ್ರಮುಖವಾದದ್ದು, ಹಾಗಾಗಿ ಶಸ್ತ್ರ ಧರಿಸಿದ ಸೈನಿಕರು ಗಡಿಯಲ್ಲಿದ್ದರೆ ನಾವು ಅವರಿಗೆ ಪೂರ್ಣ ಬೆಂಬಲ ಕೊಡುವ ಶಕ್ತಿಯಾಗಿ ಪ್ರತಿ ಗ್ರಾಮ ಗ್ರಾಮಗಳಲ್ಲೂ ಕೆಲಸ ಮಾಡಬೇಕು. ಚೀನಾ ವಿನಾಃ ಕಾರಣ ಅಟ್ಟಹಾಸದಲ್ಲಿ ದೂರ್ತ ಶಕ್ತಿಯಾಗಿ ಬರುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರವಾದ ಭಾರತವನ್ನು ಕಟ್ಟುವ ಕೆಲಸವನ್ನು ಮಡುತ್ತಿದ್ದಾರೆ. ಯಾರಿಗೂ ತೊಂದರ ಆಗಬಾರದು, ಜಗತ್ತಿಗೆ ಒಳ್ಳೆದಾಗಬೇಕೆಂದು ಕೆಲಸ ಮಾಡುತ್ತಿದ್ದಾರೆ. ಡೊಕ್ಲಾಮ್‌ನಲ್ಲಿ ಬೇಕಾದ ಅಭಿವೃದ್ಧಿ ಕೆಲಸ ಮಾಡುತ್ತಿದ್ದರೆ. ಆದರೆ ಇದನ್ನು ಸಹಿದ ಚೀನಾ ಸಂಘರ್ಷಕ್ಕೆ ಇಳಿಯುತ್ತಿದೆ. ಆದರೆ ನಮ್ಮ ಸೈನ್ಯ ಅಗಾದವಾದ ಶಕ್ತಿಯನ್ನು ಹೊಂದಿದೆ. ಅದಕ್ಕೆ ದೊಡ್ಡ ಬೆಂಬಲವಾಗಿ ತರುಣ ಶಕ್ತಿ ನಮ್ಮಲ್ಲಿ ಇದೆ. ಆತ್ಮನಿರ್ಭರ ಭಾರತವನ್ನು ಗಟ್ಟಿ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರು ಅಮರ್ ಜವಾನ್ ಜ್ಯೋತಿ ಬಳಿ ಹಣತೆ ಬೆಳಗಿಸಿ, ಭಾರತ ಮಾತೆಯಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಈ ಸಂದರ್ಭದಲ್ಲಿ ಎಬಿವಿಪಿ ನಗರ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷ ಪ್ರಶಾಂತ್, ವಿವೇಕಾನಂದ ಕಾಲೇಜು ಘಟಕದ ಅಧ್ಯಕ್ಷ ಮನೀಶ್ ಕುಲಾಲ್, ಕಾರ್ಯಕರ್ತರಾದ ಜಗದೀಶ್, ನಿಶಾಂತ್. ಮಿತೇಶ್, ಹರ್ಷಿತ್, ಕೀರ್ತನ್, ಅಭಿಷೇಕ್, ಜಗದೀಶ್ ಜೆ, ದೀಕ್ಷಿತ್, ಕಿಶನ್, ವಿನೀಶ್, ಹೃತೇಷ್, ಪ್ರಾಣೇಶ್ ಮತ್ತಿತರರು ಉಪಸ್ಥಿತರಿದ್ದರು.