ಅಕ್ಷರಶಃ ನಿಜವಾಗುತ್ತಿದೆ ಕಹಳೆ ನ್ಯೂಸ್ ಸಮೀಕ್ಷೆ – ಅಡಿಕೆ ಬೆಳೆಗಾರರಿಗೆ ಬಿಗ್ ಗುಡ್ ನ್ಯೂಸ್ : ದಾಸ್ತಾನು ಕೊರತೆಯಿಂದ ಅಡಿಕೆ ದರ ದಿನದಿಂದ ದಿನಕ್ಕೆ ಏರಿಕೆ, 320 – 350 ರ ಆಸುಪಾಸಿನಲ್ಲಿ ಅಡಿಕೆ ಖರೀದಿ – ಕಹಳೆ ನ್ಯೂಸ್
ಮಂಗಳೂರು : ಕರಾವಳಿ ಪ್ರಮುಖ ಬೆಳೆ ಅಡಿಕೆ, ಲಕ್ಷಾಂತರ ಕೃಷಿಕರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವ ನಡೆಸುತ್ತಿದ್ದಾರೆ, ಇಂತಹ ರೈತಾಪಿ ವರ್ಗಕ್ಕೆ ಲಾಕ್ ಡೌನ್ ನಂತರ ಗುಡ್ ನ್ಯೂಸ್ ಒಂದು ಬಂದಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆಯು ಕೆಜಿಗೆ 350, 400 ಆಗುವ ನಿರೀಕ್ಷೆ ಹೆಚ್ಚಾಗಿದೆ ಎಂಬ ವರದಿಯನ್ನು ಕಹಳೆನ್ಯೂಸ್ ಪ್ರಸಾರ ಮಾಡಿತ್ತು, ವರದಿ ಪ್ರಸಾರಕ್ಕೂ ಮುನ್ನ 305 ರಿಂದ 310 ಇದ್ದು ಹಳೆ ಅಡಿಕೆಯ ದರದಲ್ಲಿ ಜಿಗಿತ ಖಂಡಿದೆ. 315 ರಿಂದ 320 ರಂತ್ರೆ ಅಡಿಕೆ ಖರೀದಿಯಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಅಡಿಕೆ ಪೂರೈಕೆಯಾಗುತ್ತಿಲ್ಲ.
ಈ ಬೆಳವಣಿಗೆಯನ್ನು ಗಮನಿಸುತ್ತಿರುವ, ಲಾಕ್ ಡೌನ್ ನಿಂದ ಕಂಗೆಟ್ಟ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಭಾರಿ ಪ್ರಮಾಣದಲ್ಲಿ ಅಡಿಕೆಯ ಕೊರತೆ ಇದ್ದು, ಅಡಿಕೆಯ ಕ್ರಯ ಉತ್ತುಂಗಕ್ಕೆ ಏರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ. ಕಳೆದ ವರ್ಷ ಫಸಲಿನ ಸಮಯದಲ್ಲಿ ಕೊಳೆರೋಗ, ವಾತಾವರಣದ ಪ್ರತಿಕೂಲ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆಯ ಫಸಲು ಪಡೆಯಲು ಕೃಷಿಕರಿಗೆ ಸಾಧ್ಯವಾಗಿರಲಿಲ್ಲ, ಹಾಗೂ ದೊಡ್ಡ ಪ್ರಮಾಣದ ಬೆಲೆಯೂ ಲಭಿಸಿರಲಿಲ್ಲ, ಈ ಕಾರಣದಿಂದಾಗಿ ಗುಜರಾತ್ ಸೇರಿದಂತೆ ಉತ್ತರ ಭಾರತದ ದಾಸ್ತಾನು ಕೇಂದ್ರಗಳಲ್ಲಿ ಅಡಿಕೆ ಸಂಗ್ರಹ ಕಡಿಮೆ ಆಗಿ ಬೇಡಿಕೆ ಹೆಚ್ಚಿರುವುದು ಕೂಡ ಧಾರಣೆ ಜಿಗಿತಕ್ಕೆ ಕಾರಣ ಎಂದು ಹೇಳಲಾಗಿದ್ದರೂ, ಅಡಿಕೆಯ ಆಮದಿಗೆ ನಿಷೇಧ ಮತ್ತು ಲಾಕ್ ಡೌನ್ ಪರಿಣಾಮ ಉಂಟಾದ ಬದಲಾವಣೆ ಕೂಡ ಧಾರಣೆ ಏರಿಕೆಗೆ ಕಾರಣವೆನ್ನಬಹುದು.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿಕರಿಗೆ ಹೆಚ್ಚು ಖರ್ಚು ಕಂಡುಬಂದಿಲ್ಲ. ಮನೆಯವರೆಲ್ಲಾ ಮನೆಯಲ್ಲೇ ಇದ್ದ ಪರಿಣಾಮ ಈ ಅವಧಿಯ ಕೃಷಿ ಚಟುವಟಿಕೆಗಳನ್ನು ಮನೆಮಂದಿಯೇ ನಿಭಾಯಿಸಿದ್ದಾರೆ. ಶುಭ ಸಮಾರಂಭಗಳೂ ನಡೆದಿಲ್ಲ, ಯಾವುದೇ ದೂರ ಪ್ರಯಾಣವೂ ಇರಲಿಲ್ಲ ಹಾಗಾಗಿ ಕೃಷಿ ಕೂಲಿಯಾಳುಗಳ ಸಂಬಳ ಸೇರಿದಂತೆ ಯಾವುದೇ ಹೆಚ್ಚು ಖರ್ಚುಗಳಾಗಿಲ್ಲ. ಹಾಗಾಗಿ ಅಡಿಕೆ ಮಾರಾಟ ಮಾಡುವ ಪ್ರಮೇಯ ಬಂದಿರಲಿಲ್ಲ.
ಮೇನಲ್ಲಿ ಧಾರಣೆ ಒಮ್ಮೆ ಏರಿಕೆಯಾಗಿ ಮತ್ತೆ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ಹೆಚ್ಚು ಅಡಿಕೆ ಮಾರುಕಟ್ಟೆಗೆ ಬಂದಿತ್ತು. ಧಾರಣೆ ಇಳಿಕೆಯ ಆತಂಕದಿಂದ ಅಡಿಕೆ ಮಾರಾಟ ಮಾಡುದ್ದರು. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಪೂರೈಕೆ ಇಲ್ಲ, ಹೀಗಾಗಿ ಬೆಲೆ ಏರಿಕೆಯಾಗಿದೆ.
ಜೂನ್ ತಿಂಗಳ ಮೊದಲವಾರದಲ್ಲಿ 300 ರೂ. ಗಡಿ ದಾಟಿದ್ದು, ಈಗ 315 ರಿಂದ 320ರ ಗಡಿ ದಾಟಿದ್ದು, ಅಡಿಕೆ ಕೊರತೆ ಕಾರಣ ಈ ಬಾರಿ ಧಾರಣೆ 350 ರಿಂದ 400ರೂ. ತನಕ ಏರುವ ನಿರೀಕ್ಷೆಯಿದೆ.
ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಬೇಡಿಕೆ ಗಮನಿಸಿದರೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಈಗ ಅಡಿಕೆ ಬೆಳೆಗಾರರು ಅಡಿಕೆ ಮಾರಾಟದ ವೇಳೆ ಬಿಲ್ ಹಾಗೂ ನಗದು ವ್ಯವಹಾರ ಮಾಡುವುದು ಹೆಚ್ಚು ಸೂಕ್ತ. ಈಗ ವ್ಯಾಪಾರಿಗಳ ಸಂಖ್ಯೆ, ಮನೆಯಿಂದ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮೋಸ, ವಂಚನೆಯಾಗದಂತೆ ಬೆಳೆಗಾರರೇ ಎಚ್ಚರ ವಹಿಸಬೇಕಿದೆ.
– ಮಹೇಶ್ ಪುಚ್ಚಪ್ಪಾಡಿ , ಕಾರ್ಯದರ್ಶಿ, ಅಖಿಲ ಭಾರತ ಅಡಿಕೆ ಬೆಳೆಗಾರರ