Sunday, January 19, 2025
ಸುದ್ದಿ

ಡಾನ್’ ಜಯರಾಜ್ ಆಪ್ತ ಕುಖ್ಯಾತ ರೌಡಿ ಕೊರಂಗು ಕೃಷ್ಣ ಅನಾರೋಗ್ಯಕ್ಕೆ ಬಲಿ!-ಕಹಳೆ ನ್ಯೂಸ್

ಬೆಂಗಳೂರಿನ ಭೂಗತ ಲೋಕವನ್ನು ಒಂದು ಕಾಲದಲ್ಲಿ ತನ್ನ ಇಶಾರೆಯ ಮೇಲೆ ಆಳುತ್ತಿದ್ದ ಕುಖ್ಯಾತ ರೌಡಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಆಂಧ್ರದ ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

10 ವರ್ಷಗಳ ಹಿಂದೆ ಮತ್ತೊಬ್ಬ ಕುಖ್ಯಾತ ರೌಡಿ ಹೆಬ್ಬೆಟ್ಟು ಮಂಜ ತನ್ನ ಸಹಚರರ ಜೊತೆ ಕೊರಂಗು ಮೇಲೆ ದಾಳಿ ಮಾಡಿದ್ದ. ಹಿರಿಯೂರಿನ ಡಾಬಾದಲ್ಲಿ ನಡೆದಿದ್ದ ದಾಳಿಯಲ್ಲಿ ಕೊರೊಂಗು ಕೈ ಕಟ್ ಆದರೂ ಪ್ರಾಣಾಪಾಯದಿಂದ ಪಾರಾಗಿದ್ದ. ಆ ಬಳಿಕ ರೌಡಿಯಿಸಂ ಚಟುವಟಿಕೆಗಳ ಕಾರಣಕ್ಕೆ ಕೊರಂಗುನನ್ನು ಗಡಿಪಾರು ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ತೂರಿನಲ್ಲೇ ನೆಲೆಸಿದ್ದ ಕೃಷ್ಣ ಅಲ್ಲಿಯೇ ವ್ಯವಹಾರ ಮಾಡುತ್ತಿದ್ದ. ಕೊರಂಗು ಕೃಷ್ಣ ರಾಜರಾಜೇಶ್ವರಿ ನಗರ ಕ್ಷೇತ್ರದ ಎಂಎಲ್ ಎ ಮುನಿರತ್ನ ಸಹೋದರನಾಗಿದ್ದಾನೆ. ರೌಡಿಶೀಟರ್ ಕೊರಂಗು ವಿರುದ್ಧ ಬೆಂಗಳೂರು ವಿವಿಧ ಠಾಣೆಗಳಲ್ಲಿ ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಹಲವು ಕೇಸ್ ಗಳು ದಾಖಲಾಗಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾನ್’ ಆಗಿದ್ದ ಜಯರಾಜ್ ಆಪ್ತನಾಗಿ ಗುರುತಿಸಿಕೊಂಡಿದ್ದ ಕೊರಂಗು ಚಿತ್ತೂರಿನಲ್ಲಿ ತನ್ನ ಅಣ್ಣ ಮುನಿರತ್ನ ಅವರ ಗಣಿ ವ್ಯವಹಾರ ನೋಡಿಕೊಂಡಿದ್ದ ಎನ್ನಲಾಗಿದೆ.