Recent Posts

Thursday, November 21, 2024
ರಾಜಕೀಯಶಿಕ್ಷಣಸುದ್ದಿ

ಜುಲೈ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ; ಸಚಿವ ಸುರೇಶ್ ಕುಮಾರ್ – ಕಹಳೆ ನ್ಯೂಸ್

ಬೆಂಗಳೂರು : ದ್ವಿತೀಯ ಪಿಯುಸಿಗೆ ಬಾಕಿ ಉಳಿದುಕೊಂಡಿದ್ದ ಇಂಗ್ಲಿಷ್​ ಪರೀಕ್ಷೆಯನ್ನು ನಿನ್ನೆ ಮಾಡುವ ಮೂಲಕ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಫಲಿತಾಂಶದ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ.

ಎರಡು ತಿಂಗಳ ಹಿಂದೆಯೇ ಇಂಗ್ಲಿಷ್​ ಹೊರತುಪಡಿಸಿ ಉಳಿದ ವಿಷಯಗಳ ಪರೀಕ್ಷೆಗಳು ಮುಗಿದಿವೆ. ಅದಾಗಲೇ ಮೌಲ್ಯಮಾಪನ ಕೂಡ ಶುರುವಾಗಿತ್ತು. ಅದರೆ ಕರೊನಾವೈರಸ್​ ಹಿನ್ನೆಲೆಯಲ್ಲಿ ಮೌಲ್ಯಮಾಪನವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಇದೀಗ ಬಾಕಿ ಇರುವ ವಿಷಯಗಳ ಮೌಲ್ಯಮಾಪನಕ್ಕಾಗಿ ಎಲ್ಲ ಮೌಲ್ಯಮಾಪಕರು ಆಗಮಿಸುವಂತೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮಾಹಿತಿ ನೀಡಿರುವ ಸಚಿವರು, 39 ವಿಷಯಗಳ ಪೈಕಿ, 26 ವಿಷಯಗಳ ಮಾಲ್ಯಮಾಪನ ಮುಗಿದಿದೆ, 9 ವಿಷಯಗಳ ತಿದ್ದುಪಡಿ ಕೊನೆಯ ಹಂತದಲ್ಲಿದೆ, ಭೌತಶಾಸ್ತ್ರ, ರಸಾಯನಶಾಸ್ತ್ರ ಗಣಿತ, ಕಂಪ್ಯೂಟರ್ ಸೈನ್ಸ್, ಸಂಖ್ಯಾ ಶಾಸ್ತ್ರ, ಜೀವಶಾಸ್ತ್ರ ಮತ್ತು ನಿನ್ನೆ ನಡೆದಿರುವ ಇಂಗ್ಲಿಷ್ ಪತ್ರಿಕೆಗಳ ಮೌಲ್ಯಮಾಪನ ಬಾಕಿ ಉಳಿದಿದೆ ಎಂದಿದ್ದಾರೆ.

 

ಇಂಗ್ಲಿಷ್​ ಪರೀಕ್ಷೆಯ ಮೌಲ್ಯಮಾಪನ 20 ಜಿಲ್ಲೆಗಳಲ್ಲಿ ನಡೆಸಲಾಗುವುದು. ಮೌಲ್ಯ ಮಾಪನಕ್ಕಾಗಿ ನೀಡುವ ಗೌರವ ಧನವನ್ನು ಹಿಂದಿನ ವರ್ಷಗಳಂತೆ ತಡ ಮಾಡದೇ ಶೀಘ್ರವಾಗಿ ನೀಡಲಾಗುವುದು. ಮೊದಲ ಹಂತದ ಗೌರವ ಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.