Sunday, January 19, 2025
ಪುತ್ತೂರುಸುದ್ದಿ

ಜೂ.21ಕ್ಕೆ ಖಂಡ ಗ್ರಾಸ ಸೂರ್ಯಗ್ರಹಣ ಹಿನ್ನಲೆ : ಹತ್ತೂರ ಒಡೆಯ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯ ಬದಲಾವಣೆ – ಕಹಳೆ ನ್ಯೂಸ್

ಪುತ್ತೂರು: ಜೂ.21ಕ್ಕೆ ಖಂಡ ಗ್ರಾಸ ಸೂರ್ಯಗ್ರಹಣ ನಡೆಯಲಿರುವುದರಿಂದ ದೇವಸ್ಥಾನದಲ್ಲಿ ಸಾರ್ವಜನಿಕ ದರುಶನಕ್ಕೆ ಸಮಯ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆಯೇ ಮಧ್ಯಾಹ್ನದ ಪೂಜೆ ನಡೆಯಲಿದ್ದು ಬಳಿಕ ಬಾಗಿಲು ಮುಚ್ಚಲಾಗುವುದು.
ಬೆಳಿಗ್ಗೆ ಗಂಟೆ 7.30ಕ್ಕೆ ಪ್ರಾತಃ ಕಾಲ ಪೂಜೆ, ನಂತರ ಗಂಟೆ 9.15ಕ್ಕೆ ಮದ್ಯಾಹ್ನ ಪೂಜೆ ನಡೆಯಲಿದ್ದು, ಬಳಿಕ ಬಾಗಿಲು ಹಾಕಲಾವುದು. ಸಂಜೆ ಗಂಟೆ 4ಕ್ಕೆ ಬಾಗಿಲು ತೆರೆಯುವುದು. ರಾತ್ರಿ ಗಂಟೆ 7.30ರ ರಾತ್ರಿ ಪೂಜೆ ನಡೆಯಲಿದೆ. ಈ ನಡುವೆ ದೇವಳದಲ್ಲಿ ಗ್ರಹಣ ಶಾಂತಿ ಹೋಮ ಇರುವುದಿಲ್ಲ. ಭಕ್ತರು ಸಹಕರಿಸುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು