Sunday, January 19, 2025
ಪುತ್ತೂರುರಾಜಕೀಯ

ಪುತ್ತೂರು ಬಿಜೆಪಿ ಕಚೇರಿಗೆ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಭೇಟಿ ; ನೂತನ ಅಧ್ಯಕ್ಷರಿಗೆ ಬಿಜೆಪಿ ಮುಖಂಡರಿಂದ ಗೌರವ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು: ನಮ್ಮ ಯುವಕರಲ್ಲಿ ದುಡಿಯವ ಸಂಸ್ಕೃತಿ ಕಡಿಮೆ. ಇದಕ್ಕೆ ಕಾರಣ ರಾಜಕರಾಣಗಳು. ದುಡಿಯುವ ಸಂಸ್ಕೃತಿಯಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಕಿಯೋನಿಕ್ಸ್ ಅಧ್ಯಕ್ಷರಾದ ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದರು.

ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್(ಕಿಯೋನಿಕ್ಸ್)ನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಅವರು ಪುತ್ತೂರು ಬಿಜೆಪಿ ಕಚೇರಿಗೆ ಪ್ರಥಮ ಭೇಟಿ ನೀಡಿದರು. ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದಿಂದ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭ ಅವರು ಮಾತನಾಡಿ ನನಗೆ ಇವತ್ತು ತಂತ್ರಾಜ್ಣಾನಗಳಿಗೆ ಹುಟ್ಟಿದ ಸಂಸ್ಥೆಯ ಅಧ್ಯಕ್ಷ ಸ್ಥಾನ ಕೊಟ್ಟಿರುವುದನ್ನು ಕಾರ್ಯಕರ್ತರ ಪಾದಗಳಿಗೆ ಅರ್ಪಣೆ ಮಾಡುತ್ತೇನೆ ಎಂದು ಹೇಳಿದರು. ಜನರನ್ನು ಸೋಮಾರಿತನ ಮಾಡುವ ರಾಜಕೀಯ ವ್ಯವಸ್ಥೆ ದೇಶಕ್ಕೆ ಅಪಾಯಕಾರಿ ಇದನ್ನು ಸರಿ ಮಾಡಲು ಉದ್ಯೋಗ ಸೃಷ್ಟಿ ಮಾಡಬೇಕು. ಯುವಕರಿಗೆ ಉದ್ಯೋಗ ಕೊಡಿಸಬೇಕು ಎಂದ ಅವರು ರಾಜಕಾರಣ ಮೀನು ತಿನ್ನಿಸಲು ಕಲಿಸಿದೆ. ಮೀನು ಹಿಡಿಯವ ಕೆಲಸವನ್ನೂ ಕಲಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿಟ್ಟಿನಲ್ಲಿ ಕಿಯೋನಿಕ್ಸ್‌ನ್ನು ರಾಜ್ಯದ ಯುವಕರ ಬದುಕಿನ ಸಂಸ್ಥೆಯಾಗಿ ಬೆಳೆಸುತ್ತೇನೆ ಎಂದರು. ಸರಕಾರಿ ಹೊರಗುತ್ತಿಗೆ ನೇಮಕಕ್ಕೆ ಕಿಯೋನಿಕ್ಸ್ ಪ್ರಮಾಣ ಪತ್ರ ನೀಡಬೇಕು. ಈ ಕೆಲಸ ಹಿಂದಿನಿಂದ ನಡೆಯುತ್ತಿದ್ದು ಬಳಿಕ ನಿಂತು ಹೋಗಿದೆ. ಅದನ್ನು ಮತ್ತೆ ಪುನರಾಂಭ ಮಾಡಬೇಕು. ಈಗ ನಾನು ಸಂಸ್ಥೆಗೆ ಕಾಲಿಟ್ಟಿದ್ದೇನೆ ಅಷ್ಟೆ. ಇನ್ನು ಅಲ್ಲಿ ಎಷ್ಟು ಇಲಿ, ಹೆಗ್ಗಣ ಇದೆ ಎಂದು ನೋಡಬೇಕಷ್ಟೆ. ಎಲ್ಲವನ್ನು ಸರಿ ಮಾಡಲು ನನ್ನ ನಿಷ್ಠೆ ಒಂದೆ ಸಾಲದು ಪಕ್ಷದ ಬೆಂಬಲವೂ ಬೇಕು. ಹಾಗಾಗಿ ೨೦ ವರ್ಷದ ಹಿಂದೆ ಕಿಯೋನಿಕ್ಸ್ ಹೇಗೆ ಶಯಿನ್ ಆಗಿತ್ತೋ ಅದನ್ನು ಪುನರಪಿ ಮಾಡಲಿದ್ದೇನೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿಯೋನಿಕ್ಸ್‌ನ ನೂತನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಗೆ ಗೌರವ ಸಮರ್ಪಣೆ :

ಕಿಯೋನಿಕ್ಸ್‌ನ ನೂತನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರಿಗೆ ಪುತ್ತೂರು ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ಪದಾಧಿಕಾರಿಗಳು ಶಾಲು ಹೊದೆಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ಬಿಜೆಪಿ ಜಿಲ್ಲಾ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರೆಳೆ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಹಿಂದುಳಿದ ಮೋರ್ಛಾ ಅಧ್ಯಕ್ಷ ಆರ್.ಸಿ.ನಾರಾಯಣ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು. ನಿತೀಶ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.


ಬಿಜೆಪಿಯ ಮುಖಂಡರಿಂದ ಹಿಡಿದು ಕಾರ್ಯಕರ್ತರೆಲ್ಲರೂ ಚೀನಾ ಬಾಯ್ ಕಟ್ ಮಾಡಬೇಕು. ಹೇಗೆ ಬಾಲಗಂಗಾಧರ ತಿಲಕ್ ಅವರು ಸ್ವರಾಜ್‌ಕ್ಕಾಗಿ ಆಂದೋಲನ ಮಾಡಿದ್ದಾರೋ ಅದೇ ರೀತಿ ನಾವು ಆಂದೋಲನ ಮಾಡಬೇಕಾಗಿದೆ. ಚೀನಾಕ್ಕೆ ಆರ್ಥಿಕ ಶಕ್ತಿ ಬಂದಿದ್ದರೆ ಅದು ಭಾರತವೇ ಕಾರಣ. ಹಾಗಾಗಿ ನಾವು ಚೀನಾವನ್ನು ಗುಂಡಿನಿಂದಲ್ಲ. ಚೀನಾಕ್ಕೆ ಆರ್ಥಿಕ ಹೊಡೆತದ ಬಹಿಷ್ಕಾರ ಮಾಡುಬೇಕು.

– ಹರಿಕೃಷ್ಣ ಬಂಟ್ವಾಳ್, ಅಧ್ಯಕ್ಷರು ಕಿಯೋನಿಕ್ಸ್