Sunday, January 19, 2025
ಪುತ್ತೂರುಸುದ್ದಿ

ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಮತ್ತು ವಿ.ಹಿಂ.ಪ ಬಜರಂಗದಳ ಹಿಂದವಿ ಶಾಖೆ ಬಲ್ನಾಡು ಇದರ ವತಿಯಿಂದ ವೀರ ಮರಣ ಹೊಂದಿದ ಭಾರತಾಂಭೆಯ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ -ಕಹಳೆ ನ್ಯೂಸ್

ಭಾರತ ಮತ್ತು ಚೀನಾ ಗಡಿಯಲ್ಲಿರುವಂತಹ ಗ್ಯಾಲ್ವನ್ ಕಣಿವೆ ಯಲ್ಲಿ ಪಾಪಿ ಚೀನಾ ಕುತಂತ್ರಿ ನರಿಗಳಿಂದ ವೀರ ಮರಣ ಹೊಂದಿದ ಭಾರತಾಂಭೆಯ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯು ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿಂದವಿ ಶಾಖೆ ಬಲ್ನಾಡು ಇದರ ವತಿಯಿಂದ ನಡೆಯಿತು.
ಈ ಸಂದರ್ಭ ಬಜರಂಗದಳ ಪುತ್ತೂರು ಪ್ರಖಂಡ ಸಾಪ್ತಾಹಿಕ ಮಿಲನ್ ಪ್ರಮುಖ್ ವಿಶಾಖ್ ಸಸಿಹಿತ್ಲು ನುಡಿನಮನ ಸಲ್ಲಿಸಿದರು, ಚೇತನ್ ಬಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭ ಬಜರಂಗದಳ , VFB ಪದಾಧಿಕಾರಿಗಳಾದ  ಗುರುರಾಜ್ ಬಲ್ನಾಡು, ಭರತ್ ಚನಿಲ, ಜಿತೇಶ್ ಬಲ್ನಾಡು, ಅರುಣ್ ಬಲ್ನಾಡು, ರೂಪೇಶ್ ಬಲ್ನಾಡು, ಹರ್ಷಿತ್ ಬಲ್ನಾಡು ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು