Sunday, January 19, 2025
ಸುದ್ದಿ

ಸಚಿವ ಡಾ.ಕೆ.ಸುಧಾಕರ್ ಗೆ ಕೊರೊನಾ ಭೀತಿ ! ಅಡುಗೆ ಮಾಡುವವರಿಗೆ ಕೊರೊನಾ ಸೋಂಕು ದೃಢ-ಕಹಳೆ ನ್ಯೂಸ್

ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿ ಆರ್ಭಟ ಹೆಚ್ಚುತ್ತಿದ್ದಂತೆಯೇ ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೂ ಕೊರೊನಾ ಭೀತಿ ಆವರಿಸಿದೆ.

ಸಚಿವ ಸುಧಾಕರ್ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲೀಗ ಸಚಿವ ಸುಧಾಕರ್ ಅವರು ಕೊರೊನಾ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮನೆಯಲ್ಲಿ ವಾಸವಾಗಿದ್ದ 87 ವರ್ಷದ ಸುಧಾಕರ್ ಅವರ ತಂದೆಗೆ ಅನಾರೋಗ್ಯ ಕಾಡುತ್ತಿದ್ದು, ಇಡೀ ಕುಟುಂಬಸ್ಥರೇ ಇದೀಗ ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಅಲ್ಲದೇ ಇಡೀ ಕುಟುಂಬ ಇದೀಗ ಕೊರೊನಾ ವರದಿಗಾಗಿ ಕಾಯುತ್ತಿದ್ದೇವೆ ಅಂತಾ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊರ ರಾಜ್ಯಗಳಲ್ಲಿನ ರಾಜಕಾರಣಿಗಳಿಗೆ ಕೊರೊನಾ ಸೋಂಕು ಆವರಿಸುತ್ತಿತ್ತು. ಆದ್ರೀಗ ರಾಜ್ಯದ ರಾಜಕಾರಣಿಗೂ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ತನ್ನ ತಂದೆ ಶೀಘ್ರದಲ್ಲಿಯೇ ಗುಣಮುಖರಾಗಿವಂತೆ ಪ್ರಾರ್ಥಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು