Sunday, January 19, 2025
ಸುದ್ದಿ

ಹಿಂದೂ ಜಾಗರಣ ವೇದಿಕೆ ಪೆರ್ನೆ,ಭಾರತೀಯ ಜನತಾ ಪಾರ್ಟಿ ಪೆರ್ನೆ – ಬಿಳಿಯೂರು, ಯುವ ಸ್ಪಂದನ ಪೆರ್ನೆ ಇದರ ವತಿಯಿಂದ ಶ್ರೀ ರಾಮ ಭಜನಾ ಮಂದಿರ ಸಾಕೇತಪುರ ಕಡಂಬು ಇಲ್ಲಿ ಚೀನದ ಕುತಂತ್ರಿ ಬುದ್ದಿಗೆ ಗಡಿಯಲ್ಲಿ ಸಾವನ್ನಪ್ಪಿದ ನಮ್ಮ ಭಾರತೀಯ ಸುಮಾರು ಇಪ್ಪತ್ತ ಒಂದು ಯೋಧರಿಗೆ ಶೃದ್ದಾಂಜಲಿ ಕಾರ್ಯಕ್ರಮ-ಕಹಳೆ ನ್ಯೂಸ್

ಹಿಂದೂ ಜಾಗರಣ ವೇದಿಕೆ ಪೆರ್ನೆ,ಭಾರತೀಯ ಜನತಾ ಪಾರ್ಟಿ ಪೆರ್ನೆ – ಬಿಳಿಯೂರು, ಯುವ ಸ್ಪಂದನ ಪೆರ್ನೆ ಇದರ ವತಿಯಿಂದ ಶ್ರೀ ರಾಮ ಭಜನಾ ಮಂದಿರ ಸಾಕೇತಪುರ ಕಡಂಬು ಇಲ್ಲಿ ಚೀನದ ಕುತಂತ್ರಿ ಬುದ್ದಿಗೆ ಗಡಿಯಲ್ಲಿ ಸಾವನ್ನಪ್ಪಿದ ನಮ್ಮ ಭಾರತೀಯ ಸುಮಾರು ಇಪ್ಪತ್ತ ಒಂದು ಯೋಧರಿಗೆ ಶೃದ್ದಾಂಜಲಿ ಕಾರ್ಯಕ್ರಮವು ನಡೆಯಿತು.

ತಾಯಿ ಭಾರತಮಾತೆಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವು ಪ್ರಾರಂಭಗೊಂಡಿತು.ದಿಕ್ಸೂಚಿ ಭಾಷಣವನ್ನು ಹಿಂದು ಜಾಗರಣ ವೇದಿಕೆಯ ಮಾತೃಸುರಕ್ಷಾ ವಿಭಾಗ ಸಂಯೋಜಕರಾದ ಬ. ಗಣರಾಜ್ ಭಟ್ ಬಡೆಕ್ಕಿಲ ಇವರು ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರಾದ ವಿಶ್ವನಾಥ ಶೆಟ್ಟಿ ಇರುವೈಲು,ಬಿಜೆಪಿಯ ಹಿರಿಯ ಕಾರ್ಯಕರ್ತರಾದ ವೆಂಕಪ್ಪ ನಾಯ್ಕ ಅಗರ್ತಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕ್ ಪ್ರದಾನ ಕಾರ್ಯದರ್ಶಿ ಮನೋಜ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮ ದಲ್ಲಿ ಚೀನ ಗಡಿಯಲ್ಲಿ ನಮ್ಮನಗಲಿದ ಸೈನಿಕರ ನೆನಪಿಗೆ 21 ಹಣತೆಗಳನ್ನು ಹಚ್ಚಿ ಮೌನ ಪ್ರಾರ್ಥನೆ ಸಲ್ಲಿಸಲಾಯ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪ್ರತಿಜ್ಞ ವಿಧಿಯನ್ನು ಯುವಸ್ಪಂದನ ಪೆರ್ನೆ ಇದರ ಕಾರ್ಯದರ್ಶಿ ದೀಕ್ಷಿತ್ ಕೋಡಿ ಬೋಧಿಸಿದರು ಅಲ್ಲದೆ ಕಾರ್ಯಕ್ರಮದಲ್ಲಿ ಪೆರ್ನೆ ಮಂಡಲ ಕಾರ್ಯವಾಹರಾದ ರಾಜಗೋಪಾಲ,ಮಂಡಲ ಸಹ ಕಾರ್ಯವಾಹ ಶಿವಪ್ರಸಾದ್,ಶ್ರೀರಾಮ ಮಂದಿರ ಸಾಕೇತಪುರ ಕಡಂಬು ಇದರ ಅಧ್ಯಕ್ಷರಾದ ಹಿರಿಯ ಮಾರ್ಗದರ್ಶಕರೂ ಆದ ನರಸಿಂಹ ನಾಯಕ್ ಪೆರ್ನೆ,ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷರಾದ ಗಣೇಶ ಕೆದಿಲ,ಮಾಣಿ ವಲಯ ಅಧ್ಯಕ್ಷರಾದ ಸುರೇಶ ಕೆದಿಲ,ಭಾ.ಜ.ಪ.ದ ಪೆರ್ನೆ ಬೂತ್-2ರ ಅಧ್ಯಕ್ಷರಾದ ಗಂಗಾಧರ ರೈ ವಡ್ಯದಗಯ,ಪೆರ್ನೆ ಪಂಚಾಯತ್ನ ನಿಕಟ ಪೂರ್ವ ಸದಸ್ಯೆಯಾದ ಹರಿಣಾಕ್ಷಿ ಹನುಮಾಜೆ, ಮಾಜಿ ಪಂಚಾಯತ್ ಸದಸ್ಯ ಗೋಪಾಲ ಸಪಲ್ಯ , ಯುವ ಕೇಸರಿ ಗಡಿಯಾರದ ಉಪಾಧ್ಯಕ್ಷರಾದ ಸತೀಶ್,ಹಿಂದು ಜಾಗರಣ ವೇದಿಕೆ ಕೆದಿಲದ ಅಧ್ಯಕ್ಷರಾದ ಕುಸುಮಾಧರ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಮಾತ ಭಗಿನೀಯರು ಹಾಗೂ ಎಲ್ಲಾ ದೇಶ ಭಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು