Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

Breaking News : ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದಲ್ಲಿ ದೇವರ ಮೀನುಗಳ ಕಳ್ಳತನ ; ಮಸೀದಿ ಮೌಲ್ವಿ ಸಹಿತ 7 ಮಂದಿ ದುಷ್ಟರನ್ನು ರೆಡ್ ಹ್ಯಾಂಡ್ ಹಿಡಿದ ಹಿಂದೂ ಜಾಗರಣಾ ವೇದಿಕೆ – ಕಹಳೆ ನ್ಯೂಸ್

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ದೇವರ ಮೀನುಗಳ ತಾಣ ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದಲ್ಲಿ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ ಮಸೀದಿಯ ಧರ್ಮಗುರು/ ಮೌಲ್ವಿ ಸಹಿತ 7 ಮಂದಿಯನ್ನು ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಶ್ರೀ ಶಿಶಿಲೇಶ್ವರ ದೇವಾಲಯದ ದೇವರ ಕೆರೆ ಕಪಿಲ ಕೆರೆಯಲ್ಲಿ ಕಳೆದ ಹಲವು ಸಮಯದಿಂದ ಮೀನುಗಳನ್ನು ರಾತ್ರಿ ವೇಳೆ ಕದ್ದು ಕೊಂಡೊಯ್ಯಲಾಗುತ್ತಿತ್ತು. ಕಳ್ಳರನ್ನು ಹಿಡಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಸಂಘಟನೆಯ ಕಾರ್ಯಕರ್ತರು ರಾತ್ರಿ ವೇಳೆ ಗಸ್ತು ಕುಳಿತು ಕಾರ್ಯಾಚರಣೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ 7 ಜನರ ತಂಡ ಮೀನು ಕಳ್ಳತನಕ್ಕೆ ಬಂದಿದ್ದು, ತಕ್ಷಣ ಎಚ್ಚೆತ್ತ ತಂಡ ಅವರನ್ನು ರೆ ಹ್ಯಾಂಡ್ ಆಗಿ ಹಿಡಿದಿದೆ. ಬಳಿಕ ಪೊಲೀಸರಿಗೆ ಒಪ್ಪಿಸಲಾಗಿದೆ. ಕಳ್ಳರ ತಂಡದಲ್ಲಿ ಅರಸಿನಮಕ್ಕಿ ಮಸೀದಿಯ ಧರ್ಮಗುರು ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ, ಸರಕಾರದ ಆದೇಶದಂತೆ ಕ್ಷೇತ್ರದ ಎರಡು ಕಿಮೀ ಸುತ್ತಳತೆಯಲ್ಲಿ ಮೀನುಗಾರಿಕೆಯನ್ನು ನಿಷೇದಿಸಲಾಗಿದೆ. ಹಾಗಿದ್ದೂ ದೇವಸ್ಥಾನದ ಭಕ್ತರು ಅತ್ಯಂತ ಗೌರವದಿಂದ ಪೂಜಿಸುವ, ದೇವರ ಮೀನುಗಳ ಕಳ್ಳತನ ಸತತವಾಗಿ ನಡೆಯುತ್ತಿರುವುದು , ಹಾಗೂ ಇದರಲ್ಲಿ ಅನ್ಯ ಧರ್ಮೀಯರು ತೊಡಗಿಸಿಕೊಂಡಿರುವುದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ . ಇದರ ಹಿಂದೆ ಹಿಂದೂ ಶ್ರದ್ದಾ ಕೇಂದ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ಅಡಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಕುರಿತು ಕಹಳೆನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಹಿಂ.ಜಾವೇ. ಮುಖಂಡರು ‌ಆಕ್ರೋಶ ಹೊರಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು