Sunday, November 24, 2024
ಆರೋಗ್ಯಸುದ್ದಿ

‘ಕರೊನಿಲ್​’ ಕೊವೀಡ್ ಗೆ ಆಯುರ್ವೇದಿಕ್​ ಔಷಧ ಬಿಡುಗಡೆಗೊಳಿಸಿದ ಪತಂಜಲಿ ; ಶೇ. 100 ರಷ್ಟು ಗುಣಮುಖ ಗ್ಯಾರಂಟಿ ಎಂದ ಬಾಬಾ ರಾಮ್ ದೇವ್ – ಕಹಳೆ ನ್ಯೂಸ್

ನವದೆಹಲಿ,ಜೂ 23 : ಅಶ್ವಗಂಧ, ಗಿಲೊಯ್​ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಲಾದ ಕರೊನಾ ವೈರಸ್​ ಗುಣಪಡಿಸುವ ಸಾಕ್ಷಿ ಆಧಾರಿತ ಮೊದಲ ‘ಕರೊನಿಲ್​’ ಆಯುರ್ವೇದಿಕ್​ ಔಷಧವನ್ನು ಬಾಬಾ ರಾಮದೇವ್​ ನೇತೃತ್ವದ ಪತಂಜಲಿ ಆಯುರ್ವೇದಿಕ್​ ಸಂಸ್ಥೆಯು ಇಂದು ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಡುಗಡೆ ಬಳಿಕ ಮಾತನಾಡಿದ ಬಾಬಾ ರಾಮ್ ದೇವ್ “ಕರೊನಿಲ್​ ಔಷಧವು ರೋಗಿಗಳನ್ನು 5 ರಿಂದ 14 ದಿನಗಳವರೆಗೆ ಗುಣಪಡಿಸಲಿದೆ , ಶೇ. 100 ರಷ್ಟು ಚೇತರಿಕೆ ದರವಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಿಂಗಳ ಹಿಂದೆಯೇ ಕೊರೊನಾ ಸೋಂಕು ಗುಣಪಡಿಸುವ ಔಷಧವನ್ನು ಕಂಡು ಹಿಡಿರುವುದಾಗಿ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರು ವಾದಿಸಿದ್ದರು.

ನಮ್ಮವಿಜ್ಞಾನಿಗಳು ತಯಾರಿಸಿದ ಔಷಧವನ್ನು ಸೇವಿಸಿದ 5 ರಿಂದ 14 ದಿನಗಳಲ್ಲಿ ರೋಗಿಗಳ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಮೊದಲಿಗೆ 100 ಕರೊನಾ ರೋಗಿಗಳಲ್ಲಿ ಔಷಧ ಪ್ರಯೋಗಿಸಿ ಶೇ. 100 ರಷ್ಟು ಧನಾತ್ಮಕ ಫಲಿತಾಂಶ ಪಡೆಯಲಾಯಿತು ಆದ್ದರಿಂದ, ಆಯುರ್ವೇದದ ಮೂಲಕ ಕೋವಿಡ್​-19ಗೆ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳಬಹುದಾಗಿದೆ. ಸದ್ಯ ನಾವು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ಮಾತ್ರ ಮಾಡುತ್ತಿದ್ದೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಾಕ್ಷಿ ಮತ್ತು ಡಾಟಾಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.