Sunday, January 19, 2025
ಪುತ್ತೂರುವಾಣಿಜ್ಯ

ಉಪ್ಪಿನಂಗಡಿಯ ಅತೀ ದೊಡ್ಡ ವಸ್ತ್ರದ ಶೋರೂಂ ಶ್ರೀದುರ್ಗಾ ಟೆಕ್ಸ್‌ಟೈಲ್ಸ್ & ರೇಡಿಮೇಡ್ಸ್ ಶುಭಾರಂಭ ; ದೀಪ ಬೆಳಗಿಸಿ ಶುಭಹಾರೈಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಕಳೆದ 5 ವರ್ಷಗಳಿಂದ ನಗುಮೊಗದ ಸೇವೆ ಹಾಗೂ ಗುಣಮಟ್ಟದ ವಸ್ತ್ರಗಳಿಗೆ ಮನೆ ಮಾತಾಗಿರುವ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿ, ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಬಂಟ್ವಾಳದಲ್ಲಿ ತನ್ನ ವಸ್ತ್ರಮಳಿಗೆಯನ್ನು ವಿಸ್ತರಿಸಿ ಇದೀಗ ನೂತನವಾಗಿ ಉಪ್ಪಿನಂಗಡಿ ಹಸನ್ ಟವರ್‍ಸ್‌ನಲ್ಲಿ ಪ್ರಾರಂಭಿಸಿದ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನ ನೂತನ ಸಂಸ್ಥೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್, ಉಪ್ಪಿನಂಗಡಿ ದೇವಸ್ಥಾನದ ಎಸ್.ಎಲ್.ವಿ ಮ್ಯಾನೆಜಿಂಗ್ ಟ್ರಸ್ಟಿ ಬಿ. ಗಣೇಶ್ ಶೆಣೈ, ಕರುಣಾಕರ ಸುವರ್ಣ ಉಪ್ಪಿನಂಗಡಿ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಷಿಫ್, ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೆಜರ್ ಬಿ ಮಹಮ್ಮದ್ ಆಲಿ, ಉಪ್ಪಿನಂಗಡಿ ಹಸನ್ ಟವರ್ಸ್ ಮಾಲಿಕ ಮಹಮ್ಮದ್ ಇಕ್ಬಾಲ್, ಉಪ್ಪಿನಂಗಡಿ ವಿಜಯ ವೈದ್ಯ ಶಾಲಾ ಜಗದೀಶ್ ಶೆಟ್ಟಿ, ಉಪ್ಪಿನಂಗಡಿ ಶ್ರೀರಾಮ ಸ್ಕೂಲ್ ಕರೆಸ್ಪಾಂಡೆಂಟ್ ಯುಜಿ ರಾಧಾ,ಉದ್ಯಮಿ ರಾಜಗೋಪಾಲ್ ಭಟ್ ಭಾಗವಹಿಸಿ ಶುಭ ಹಾರೈಸಿದರು. ‌

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನ & ರೆಡಿಮೇಡ್ಸ್‌ನ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮೋಹನ ಚೌಧರಿ ಎಲ್ಲರನ್ನು ಸ್ವಾಗತಿಸಿದರು. ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಸೇಲ್ಸ್ ಪ್ರಾರಂಭಗೊಂಡಿದೆ.