Sunday, January 19, 2025
ಸುದ್ದಿ

ಬೆಂಗಳೂರಿನಲ್ಲಿ ಹಾಡಹಗಲೇ ಮಚ್ಚು ಹಿಡಿದು ಪುಂಡರಿಂದ ಆರ್ಭಟ ; ಗಾಂಜಾ ಮತ್ತಿನಲ್ಲಿ ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಪುಡಿ ಪುಡಿ – ಕಹಳೆ ನ್ಯೂಸ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳು ಪುಂಡಾಟ ಮುಂದುವರಿಸಿದ್ದಾರೆ. ಇಂತಹದ್ದೇ ಘಟನೆಯೊಂದು ಚೋಳರ ಪಾಳ್ಯದಲ್ಲಿ ನಡೆದಿದ್ದು, ಪುಂಡರು ಹಾಡಹಗಲೇ ಮಚ್ಚು ಹಿಡಿದು ಆರ್ಭಟ ನಡೆಸಿದ್ದಾರೆ.

ಚೋಳರ ಪಾಳ್ಯದ 13ನೇ ಕ್ರಾಸ್‍ನಲ್ಲಿ ನಾಲ್ವರು ರೌಡಿಗಳು ರಾಜಾರೋಷವಾಗಿ ಮಚ್ಚಿನಿಂದ ರಸ್ತೆ ಬದಿಗೆ ಸಿಲ್ಲಿಸಿದ್ದ ವಾಹನಗಳ ಗಾಜು ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೇಕರಿಯನ್ನ ಲಾಂಗ್ ಮಚ್ಚಿನಿಂದ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೌಡಿಗಳು ಗಾಂಜಾ ಇಲ್ಲವೇ ಮದ್ಯದ ಮತ್ತಿನಲ್ಲಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪುಂಡಾಟವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು