Sunday, January 19, 2025
ಸುದ್ದಿ

ಬೆತ್ತಲಾದ್ಲು ಅಂದು ಶಬರಿಮಲೆ ಪ್ರವೇಶ ಮಾಡಲು ಮುಂದಾಗಿದ್ದ ರೆಹನಾ ಫಾತಿಮಾ ; ಮಕ್ಕಳಿಂದ ನಗ್ನ ದೇಹದ ಮೇಲೆ ಚಿತ್ರ ಬರೆಸಿದ ಫಾತಿಮಾ ಮೇಲೆ ಕೇಸ್..! – ಕಹಳೆ ನ್ಯೂಸ್

ತಿರುವನಂತಪುರಂ: ತನ್ನ ನಗ್ನ ದೇಹದಲ್ಲಿ ತನ್ನದೇ ಮಕ್ಕಳಿಂದ ಚಿತ್ರ ಬಿಡಿಸಲು ಪ್ರೇರೇಪಿಸಿದ್ದಲ್ಲದೆ ಅದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ರೆಹಾನಾ ಫಾತಿಮಾ ವಿರುದ್ಧ ಕೇಸ್ ದಾಖಲಾಗಿದೆ. ರೆಹನಾ ಈ ಹಿಂದೆ ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶ ಮಾಡಲು ಮುಂದಾಗುವ ಮೂಲಕ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದರು.

ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬವರು ತಿರುವಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ರೆಹಾನಾ ತನ್ನಿಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ನಗ್ನದೇಹದ ಮೇಲೆ ಚಿತ್ರ ರಚಿಸಲು ಬಳಸಿಕೊಂಡಿದ್ದಾಗಿ ಆರೋಪಿಸಿದ್ದಾರೆ. ಅರೆನಗ್ನವಾಗಿ ಬೆಡ್ ಮೇಲೆ ಮಲಗಿರುವ ರೆಹಾನಾ ದೇಹದ ಮೇಲೆ ಇಬ್ಬರು ಅಪ್ರಾಪ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು