ಬೆಂಗಳೂರು, ಜೂನ್ 27: ತೈಲ ಕಂಪನಿಗಳು ವೆಚ್ಚಕ್ಕೆ ಅನುಗುಣವಾಗಿ ಇಂಧನ ದರವನ್ನು ಹೆಚ್ಚಿಸುವುದನ್ನು ಮುಂದುವರಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶನಿವಾರ ಸತತ 21 ನೇ ದಿನವೂ ಏರಿಕೆ ಕಂಡಿವೆ.
ಪೆಟ್ರೋಲ್ ಲೀಟರ್‌ಗೆ 25 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 21 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 83.24 ರುಪಾಯಿ, ಡೀಸೆಲ್ 76.66 ರುಪಾಯಿಗೆ ಮಾರಾಟವಾಗುತ್ತಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 80.38 ರು, ಡೀಸೆಲ್‌ಗೆ 80.40 ರು ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 87.14 ರು, ಡೀಸೆಲ್ ಲೀಟರ್‌ಗೆ 78.71 ರು ಮಾರಾಟವಾಗುತ್ತಿದೆ.
ಇಂಧನ ಬೆಲೆ ಏರಿಕೆ ಕುರಿತು ವಿರೋಧ ಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಕುರಿತು ಸೋಮವಾರ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.