ನಿಮ್ಮ ಮನೆಯಲ್ಲಿರೋ ಕೃಷಿ ಯಂತ್ರೋಪಕರಣಗಳು ಹಳೆಯದಾಗಿದೆಯಾ, ಹೊಸ ಯಂತ್ರೋಪಕರಣ ಕೊಂಡುಕೊಳ್ಳುವ ಯೋಜನೆ ನಿಮ್ಮದಾಗಿದ್ದರೆ. ನಿಮಗಾಗಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಣಿಯೂರು ಇದರ ಆಶ್ರಯದೊಂದಿಗೆ, ಶ್ರೀ ಎಂಟರ್‍ಪ್ರೈಸಸ್ ಪಂಜ ಹೊಸ ಅವಕಾಶವನ್ನ ನೀಡುತ್ತಿದೆ.
ಶ್ರೀ ಎಂಟರ್ ಪ್ರೈಸಸ್ ಪಂಜ ಇವರ ಸಹಯೋಗದೊಂದಿಗೆ ಇದೇ ಬರುವ 28-6-2020ರ ಅದಿತ್ಯವಾರದಂದು, ಪದ್ಮುಂಜ ಸೋಸೈಟಿ ವಠಾರದಲ್ಲಿ ಕೃಷಿ ಯಂತ್ರೋಪಕರಣಗಳ ಮೆಗಾ ಎಕ್ಸ್‍ಚೇಂಜ್ ಹಾಗೂ ಲೋನ್ ಮೇಳ ನಡೆಯಲಿದೆ. ಹೀಗಾಗಿ ಇಲ್ಲಿ ಕೃಷಿಕರು ತಮ್ಮ ಮನೆಯಲ್ಲಿರುವ ಹಳೆಯ ಯಂತ್ರೋಪಕರಣಗಳನ್ನ ಮಾರಾಟ ಮಾಡಿ, ಹೊಸ ಯಂತ್ರೋಪಕರಣಗಳನ್ನ ಖರೀದಿಸಬಹುದಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕಾರ್ಬನ್ ಫೈಬರ್ ದೋಟಿ, ಮತ್ತು ಆಡಿಕೆ ಮರ ಹತ್ತುವ ಯಂತ್ರದ ಪ್ರದರ್ಶನ ನಡೆಯಲಿದೆ.