Saturday, November 23, 2024
ಸುದ್ದಿ

ಪುತ್ತೂರಿನಲ್ಲಿ ಈ ಬಾರಿ ಕಮಲ ಚಿಹ್ನೆಯೇ ಬಿಜೆಪಿ ಅಭ್ಯರ್ಥಿ.!? ವಿಶ್ಲೇಷಣೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಒಂದು ಕಾಲದ ಬಿಜೆಪಿ ಭದ್ರಕೋಟೆಯನ್ನು ಕಳೆದ ಬಾರಿ ಕಾಂಗ್ರೆಸ್ ಛಿದ್ರ ಮಾಡಿತ್ತು. ಹೀಗಾಗಿ ಮತ್ತೆ ಕರಾವಳಿಯಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕ್ಷೇತ್ರಗಳಲ್ಲಿ ಕಾರ್ಯಕರ್ತರ ದಂಡಿಗೆ ಚುರುಕು ಮುಟ್ಟಿಸಲಾಗಿದೆ.

ಆದರೆ ಬಿಜೆಪಿ ನಾಯಕರಿಗೆ ತಲೆನೋವಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕಾರಣದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಪಕ್ಷದ ವರಿಷ್ಠರಿಗೆ ಇನ್ನೂ ಸಾಧ್ಯವಾಗಿಲ್ಲ. ಇದರಿಂದ ಗ್ರೌಂಡ್ ವರ್ಕ್ ಮಾಡುತ್ತಿರುವ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಪರದಾಡುವ ಪರಿಸ್ಥಿತಿ ಇವರದ್ದು. ಮನೆ ಮನೆಗೆ ಹೋದರೆ ನಿಮ್ಮ ಅಭ್ಯರ್ಥಿ ಯಾರೆಂದು ಜನ ಕೇಳುತ್ತಾರೆ. ಯಾರ ಹೆಸರು ಹೇಳಲಿ ನಾವು ಅನ್ನುವುದು ಕಾರ್ಯಕರ್ತರ ಪ್ರಶ್ನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಬಿಜೆಪಿ ನಾಯಕರು ಇದಕ್ಕೊಂದು ಹೊಸ ಐಡಿಯಾ ಹುಡುಕಿದ್ದಾರೆ. ಅಭ್ಯರ್ಥಿ ಯಾರೆಂದು ಕೇಳಿದರೆ ಕಮಲ ಚಿಹ್ನೆಯೇ ನಮ್ಮ ಅಭ್ಯರ್ಥಿ. ತಾವರೆಗೆ ಮತ ಕೊಡಿ ಎಂದು ಮನವೊಲಿಸಿ ಎಂಬ ಸಲಹೆ ಕೊಟ್ಟಿದ್ದಾರೆ. ಇಂತಹುದೊಂದು ಐಡಿಯಾ ಬರಲು ಕಾರಣವೂ ಇದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ಶಿವರಂಜನ್, ಶೈಲಜಾ ಭಟ್, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಯವರು ರೇಸ್ ನಲ್ಲಿದ್ದಾರೆ. ಹೀಗಾಗಿ ಗೆಲ್ಲುವ ಕುದುರೆ ಯಾವುದು ಅನ್ನುವುದೇ ದೊಡ್ಡ ಸವಾಲು.

ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶಾಸಕಿಯಾಗಿರುವ ಶಕುಂತಳ ಶೆಟ್ಟಿ ಇಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳ ಜೊತೆಗೆ ಬಿಜೆಪಿಗೆ ಬರಬಹುದಾದ ಮತಗಳನ್ನು ಸೆಳೆಯುವ ತಾಕತ್ತು ಅವರಿಗಿದೆ.ಶಕುಂತಾಳ ಶೆಟ್ಟಿಯವರ ಹೆಸರು ಬಂದ ತಕ್ಷಣ ಹೆಸರು ನೋಡಿ ಮತ ಕೊಡುವವರ ಸಂಖ್ಯೆ ಇಲ್ಲಿ ಸಾಕಷ್ಟಿದೆ. ಹೀಗಾಗಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಬಲ್ಲ ಮುಖಕ್ಕಾಗಿ ಬಿಜೆಪಿ ಎದುರು ನೋಡುತ್ತಿದೆ. ಅಲ್ಲಿ ತನಕ ಪುತ್ತೂರು ಕ್ಷೇತ್ರದಲ್ಲಿ ಕಮಲ ಚಿಹ್ನೆಯೇ ಅಭ್ಯರ್ಥಿ.

ಗೌಡ, ಬಂಟ, ಭಟ್ಟ ಜಾತಿ ಲೆಕ್ಕಾಚಾರ :

ಪುತ್ತೂರಿನ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತಗಳು ಈ ಮೂರು ವರ್ಗದವರದ್ದು ಈ ಹಿನ್ನಲೆಯಲ್ಲಿ ಈ ಮೂರು ಸಮುದಾಯದ ನಾಯಕರ ಪರ – ವಿರೋಧ ಚರ್ಚೆಗಳು ನಡೆಯುತ್ತಿದೆ.

ಪ್ರಬಲವಾಗಿ ಡಿ ವಿ ಸದಾನಂದ ಗೌಡರ ನಂತರ ಕಳೆದ ಭಾರಿಯೂ ಗೌಡ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿ ಸಂಜೀವ ಮಠಂದೂರಿಗೆ ಟಿಕೆಟ್ ನೀಡಲಾಗಿತ್ತು ಆದರೆ, ಅದಕ್ಕಿಂತ ಮೊದಲು ಬಂಟ ಸಮುದಾಯ (ಶೆಟ್ಟಿ ) ಶುಕುಂತಲಾ ಶೆಟ್ಟಿಗೆ ಟಿಕೆಟ್ ನೀಡಲಾಗಿತ್ತು, ಆದ್ದರಿಂದ ಈ ಭಾರಿ ಬ್ರಾಹ್ಮಣರಿಗೆ ಟಿಕೆಟ್ ನೋಡಬೇಕು ಎಂದು ಆಗ್ರಹ ಕೇಳಿಬರುತ್ತಿದ್ದರೆ, ಆಕಾಂಕ್ಷಿಗಳೆಲ್ಲರೂ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಕಟ್ಟಾ ಭಕ್ತರು, ಆನೇಕ ಕಾರ್ಯಕ್ರಮಗಲ್ಲಿ ಜೊತೆಯಾದವರು, ಮಾಜಿ ಶಾಸಕ ರಾಮ ಭಟ್ ಬಿಟ್ಟರೆ ಬೇರೆ ಯಾವ ಬ್ರಾಹ್ಮಣ ಸಮುದಾಯದ ನಾಯಕನಿಗೂ ಪುತ್ತೂರಿನಲ್ಲಿ ಬ್ರಾಹ್ಮಣರ ಪ್ರಾಬಲ್ಯವಿದ್ದರೂ ಟಿಕೆಟ್ ನೀಡಿರಲಿಲ್ಲ, ಆದರೆ, ಇದರೊಂದಿಗೆ ಈ ಭಾರಿ ಈ ಮೂರು ಜಾತಿಗಳಲ್ಲದೆ, ಬೇರೆ ವರ್ಗದವರನ್ನೂ ಪರಿಗಣನೆಗೆ ತೆಗೆದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.

ವರದಿ : ಕಹಳೆ ನ್ಯೂಸ್