Sunday, January 19, 2025
ಸುದ್ದಿ

ಪುತ್ತೂರಿನ ಸಂಪ್ಯದಲ್ಲಿ ಅಕ್ರಮ ಕಸಾಯಿ ಖಾನೆಗೆ ಪೊಲೀಸ್ ದಾಳಿ ; ಇಲ್ಯಾಸ್, ನಝೀರ್ ಅಂದರ್ – ಮಾಂಸ, ಮಾರಕ ಆಯುಧಗಳ ವಶ – ಕಹಳೆ ನ್ಯೂಸ್

ಪುತ್ತೂರು;ಸಂಪ್ಯ ಸಮೀಪದ ವಾಗ್ಲೆ ಎಂಬಲ್ಲಿ ಮನೆಯ ಶೆಡ್ ಒಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿ ಖಾನೆಗೆ ಸಂಪ್ಯ ಪೊಲೀಸರು ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಮಾಂಸ ಹಾಗೂ ದನವನ್ನು ಮಾಂಸ ಮಾಡಲು ಉಪಯೋಗಿಸುತ್ತಿದ್ದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್ಯಾಪು ಗ್ರಾಮದ ಸಂಪ್ಯ ವಾಗ್ಲೆ ಅಬ್ದುಲ್ಲಾರವರ ಪುತ್ರ ಎಸ್ ಇಲ್ಯಾಸ್(37.ವ) ಹಾಗೂ ಅವರ ಪುತ್ರ ಅಬ್ದುಲ್ ನಝೀರ್(19.ವ) ಬಂಧಿತ ಆರೋಪಿಗಳು. ಇಲ್ಯಾಸ್ ಹಾಗೂ ಅಬ್ದುಲ್ಲಾ ಬಂಧಿತ ಆರೋಪಿಗಳು. ಆರ್ಯಾಪು ಸಂಪ್ಯ ಸಮೀಪದ ವಾಗ್ಲೆ ಎಂಬಲ್ಲಿ ಆರೋಪಿ ಇಲ್ಯಾಸ್‌ನ ಮನೆ ಬಳಿಯಿರುವ ಶೆಡ್ ನಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಂಪ್ಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಲ್ಯಾಸ್‌ನ ಮನೆಗೆ ಹೊಂದಿಕೊಂಡಂತೆ ಪ್ಲಾಸ್ಟಿಕ್ ತರ್ಪಾಲ್ ಹಾಕಿದ ಶೆಡ್‌ನಲ್ಲಿ ದನವನ್ನು ಕಡಿದು ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ. ರಕ್ತ ಮಿಶ್ರಿತ ಕಪ್ಪು ಬಣ್ಣದ ದನದ ಹಸಿ ಚರ್ಮ, ಬಾಲ, ಚರ್ಮದ ಮೇಲೆ ದನದ ತಲೆಯ ಭಾಗ ಹಾಗೂ ಅದರ ಪಕ್ಕದಲ್ಲಿ ಸುಮಾರು 25 ಕೆ.ಜಿಯಷ್ಟು ಹಸಿ ಮಾಂಸ ಹಾಗೂ ಅದರ ಉದರಾಂಗಗಳು ಇರುವುದು ಪತ್ತೆಯಾಗಿದೆ. ದನ ಕಡಿದು ಮಾಂಸ ಮಾಡಿ ಅದನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದನವನ್ನು ಮಾಂಸ ಮಾಡಲು ಉಪಯೋಗಿಸಿದ ಕಬ್ಬಿಣದ ಮಚ್ಚು, ಎರಡು ಚೂರಿ, ಕೆಂಪು ಬಣ್ಣದ ಒಂದು ಪ್ಲಾಸ್ಟಿಕ್ ಬುಟ್ಟಿ, ಹಳದಿ ಬಣ್ಣದ ಪ್ಲಾಸ್ಟಿಕ್ ಬುಟ್ಟಿ, ನೈಲಾನ್ ಹಗ್ಗಗಳನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಪ್ರಭಾರ ಎಸ್.ಐ. ಚೆಲುವಯ್ಯರವರ ನೇತೃತ್ವದಲ್ಲಿ ದಾಳಿ ನಡೆಸಿದ್ದು ಎಎಸ್‌ಐಗಳಾದ ತಿಮ್ಮಯ್ಯ, ರಾಮಚಂದ್ರ, ಸಿಬಂದಿಗಳಾದ ದೇವರಾಜ್, ಅದ್ರಾಮ ಹಾಗೂ ವಿನಯ ಕುಮಾರ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು