Breaking News : ರಾಜ್ಯಕ್ಕೆ ಇಂದು ಕೊರೊನಾ ಬಿಗ್ ಶಾಕ್ : ಬೆಂಗಳೂರಲ್ಲಿ 596, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 49 ಮಂದಿಗೆ ಸೋಂಕು ದೃಢ ; ಇಂದು ಒಂದೇ ದಿನ ರಾಜ್ಯದಲ್ಲಿ 918 ಮಂದಿಗೆ ಕೊರೊನಾ ಪಾಸಿಟಿವ್ – ನಾಳೆಯಿಂದ ರಾಜ್ಯಕ್ಕೆ ಕಾದಿದೆಯಾ ಗ್ರಹಚಾರ..? – ಕಹಳೆ ನ್ಯೂಸ್
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಇಂದು ಕೊರೊನಾ ಮಹಾಸ್ಪೋಟವಾಗಿದೆ. ಸಿಲಿಕಾನ್ ಸಿಟಿ ಮಂದಿ ಕೊರೊನಾ ಆರ್ಭಟಕ್ಕೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ ಬರೋಬ್ಬರಿ 596 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು, 918 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 11,923ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಂದು ಬರೋಬ್ಬರಿ 11 ಮಂದಿ ಮೃತಪಟ್ಟಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಮಹಾಮಾರಿಯ ಆತಂಕವನ್ನು ತಂದೊಡ್ಡಿದೆ. ಬೆಂಗಳೂರಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ರಾಜಧಾನಿಯಲ್ಲಿ 596 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2531ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಇದುವರೆಗೆ ಬೆಂಗಳೂರಲ್ಲಿ ಕೊರೊನಾ ಮಹಾಮಾರಿ 84 ಮಂದಿ ಮೃತರಾಗಿದ್ದಾರೆ.
ಕರಾವಳಿಯಲ್ಲಿಯೂ ಕೊರೊನಾ ಆರ್ಭಟ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು 49 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 568ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಉಡುಪಿಯಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಇಂದು ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1139ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕಲಬುರಗಿಯಲ್ಲಿ ಇಂದು 33 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಪೀಡಿತರ ಸಂಖ್ಯೆ 1364ಕ್ಕೆ ಏರಿದೆ. ಇನ್ನು ಬಳ್ಳಾರಿಯಲ್ಲಿ 24, ಗದಗ 24, ಧಾರವಾಡ 19, ಬೀದರ್ 17, ಹಾಸನ 14, ಕೋಲಾರ 14, ಯಾದಗಿರಿ 13, ಶಿವಮೊಗ್ಗ 13, ತುಮಕೂರು 13, ಚಾಮರಾಜನಗರ 13, ಮಂಡ್ಯ 12, ಮೈಸೂರು 12, ಕೊಡಗು 9, ರಾಯಚೂರು 6, ದಾವಣಗೆರೆ 6, ಬೆಂಗಳೂರು ಗ್ರಾಮಾಂತರ 5, ಉತ್ತರ ಕನ್ನಡ 2, ಬಾಗಲಕೋಟೆ 2, ಚಿಕ್ಕಮಗಳೂರು 2, ಚಿತ್ರದುರ್ಗ 2, ಬೆಳಗಾವಿ 1, ಚಿಕ್ಕಬಳ್ಳಾಪುರ 1, ಕೊಪ್ಪಳ 1 ಹಾಗೂ ಹಾವೇರಿ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12 ಸಾವಿರದ ಅಂಚಿಗೆ ಬಂದು ನಿಂತಿದೆ. ಇನ್ನು ರಾಜ್ಯದಲ್ಲಿ ಇದುವರೆಗೆ ಬರೋಬ್ಬರಿ 191 ಮಂದಿ ಮಹಾಮಾರಿಗೆ ಮೃತಪಟ್ಟಿದ್ದಾರೆ.