Sunday, January 19, 2025
ದಕ್ಷಿಣ ಕನ್ನಡಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ ; ಸುರತ್ಕಲ್ ನ 51 ವರ್ಷದ ಮಹಿಳೆ ಮೃತ – ಇಂದು ಒಂದೇ ದಿನ ಜಿಲ್ಲೆಯಲ್ಲಿ 3 ಮಂದಿ ಸಾವು – ಕಹಳೆ ನ್ಯೂಸ್

ಮಂಗಳೂರು, ಜೂನ್ 28 : ಮಂಗಳೂರಿನಲ್ಲಿ ಕೊರೋನಾ ಅಟ್ಟಹಾಸಕ್ಕೆ ಇಂದು ಮೂರನೇ ಬಲಿ ಪಡೆದಿದೆ. ಸುರತ್ಕಲ್ ನ ಜೋಕಟ್ಟೆಯ ಸಮೀಪ 51 ವರ್ಷದ ಮಹಿಳೆ ಮಾರಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಜೋಕಟ್ಟೆಯ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಳಿಕ ಗಂಟಲ ದ್ರವ ಪಡೆದು ಕೊರೋನಾ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಬಿಯಿಂದ ಬಳಲುತ್ತಿದ್ದ ಮಹಿಳೆಯು ಜೂ.26 ರಂದು ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪತಿ ದಕ್ಕೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದು, ವಾರದ ಹಿಂದೆ ತೀವ್ರ ಜ್ವರ ಕಾಣಿಸಿತ್ತು. ಬಳಿಕ ಪರೀಕ್ಷೆ ಮಾಡಿಸಿದಾಗ ಕೊರೋ‌ನಾ ದೃಢ ಪಟ್ಟಿತ್ತು. ಇದೀಗ ಮಹಿಳೆಯ ಸಾವಿನಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. ಇಂದು ಬೆಳಗ್ಗೆ ಸುರತ್ಕಲ್ 31 ವರ್ಷದ ಯುವಕ ಹಾಗೂ ಬಂಟ್ವಾಳದ‌ 57 ವರ್ಷದ ಮಹಿಳೆ ಮಾರಕ ಸೋಂಕಿಗೆ ಬಲಿಯಾಗಿದ್ದರು. ಇಂದು ಒಂದೇ ದಿನ ಮೂವರು ಸಾವನ್ನಪ್ಪಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು