Sunday, January 19, 2025
ದಕ್ಷಿಣ ಕನ್ನಡಪುತ್ತೂರು

ಸುರತ್ಕಲ್ ಕಡಲ ಕಿನಾರೆಯಲ್ಲಿ ಸೂಚನೆ ಪಾಲಿಸದೆ‌, ಈಜಲು ತೆರಳಿ ನೀರಿನಲ್ಲಿ ಕೊಚ್ಚಿಹೊಗುತ್ತಿದ್ದ ಪುತ್ತೂರಿನ ಯುವಕರನ್ನು ರಕ್ಷಿಸಿದ ಸ್ಥಳೀಯರು..! – ಕಹಳೆ ನ್ಯೂಸ್

ಮಂಗಳೂರು: ಸುರತ್ಕಲ್ ನ ಗುಡ್ಡೆ ಕೊಪ್ಲ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ ಬಂದ ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಗೂ ಗಮನ ಕೊಡದೆ ಕಡಲಲ್ಲಿ ಈಜುತ್ತಿರುವಾಗ ಕಡಲ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿರುವಾಗ ಸ್ಥಳೀಯರು ರಕ್ಷಿಸಿದ ಘಟನೆ ಇಂದು ಸಂಜೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕರನ್ನು ಕಡಲ ಮದ್ಯದಲ್ಲಿ ಮುಳುಗಿದ್ದ ಡ್ರಜ್ಜರ್ ಕಡೆಗೆ ಸಮುದ್ರದ ಅಲೆ ಎಳೆದುಕೊಂಡು ಹೋಗಿದ್ದು ಈ ವೇಳೆ ಸಹಾಯಕ್ಕೆ ಅಂಗಲಾಚುತ್ತಿದ್ದಾಗ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಲಿ ಕರಾವಳಿ ರಕ್ಷಣಾ ಪಡೆಗಾಗಲಿ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ರಕ್ಷಿಸಲು ಅಸಾಧ್ಯವಾದಾಗ ಸ್ಥಳೀಯ ವೀರಮೊಗವೀರ ಯುವಕರಾದ ಯಾದವ ಶ್ರೀಯಾನ್ ಮತ್ತು ಸುಮನ್ ರವರು ಈಜುತ್ತಾ ಡ್ರಜರ್ ಕಡೆಗೆ ಹೋಗಿ ಯುವಕನನ್ನು ಹಿಡಿದು ದಡಕ್ಕೆ ತಲುಪಿಸಿ ಬದುಕಿಸಿ ಸಾಹಸ ಮೆರೆದಿದ್ದಾರೆ. ಇವರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು