Sunday, January 19, 2025
ಸುದ್ದಿ

ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ; ಮತ್ತೆ ಲಾಕ್ ಡೌನ್..? ಮತ್ತೆ ಬಂದ್…? – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಕೋವಿಡ್ 19 ಲಾಕ್‌ಡೌನ್ ಅನ್ನು ಜುಲೈ 31 ರವರೆಗೆ ದೇಶಾದ್ಯಂತ ವಿಸ್ತರಿಸಿದ ನಂತರ ಈ ಸುದ್ದಿ ಬಂದಿದೆ. ಚೀನಾದೊಂದಿಗಿನ ಉದ್ವಿಗ್ನತೆ ನಡುವೆಯೇ ದೇಶದಲ್ಲಿ ಟಿಕ್‌ಟಾಕ್, ಯುಸಿ ಬ್ರೌಸರ್ ಮತ್ತು ಇತರ 59 ಚೈನೀಸ್ ಅಪ್ಲಿಕೇಶನ್‌ಗಳನ್ನು ಗೃಹ ಸಚಿವಾಲಯ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಇಂದಿನ ಪ್ರಧಾನಿ ಮಾತು ಪ್ರಾಮುಖ್ಯತೆ ಪಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಏತನ್ಮಧ್ಯೆ, ಭಾರತದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 5,48,318 ಕ್ಕೆ ತಲುಪಿದ್ದು, ಅದರಲ್ಲಿ 2,10,120 ಸಕ್ರಿಯವಾಗಿದ್ದರೆ, 3,21,723 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 16,475 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮತ್ತೆ ಕಠಿಣ ನಿಯಮಗಳೊಂದಿಗೆ ಲಾಕ್ ಡೌನ್ ಘೋಷಿಸುವ ಎಲ್ಲಾ ಸಾಧ್ಯತೆ ಇದೆ.