Sunday, January 19, 2025
ಸುದ್ದಿ

ಭಾರತ ಮಾತೆಯ ರಕ್ಷಣೆಗೋಸ್ಕರ ಪ್ರಾಣ ಅರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ಪೆರಾಜೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

ಚೀನಾದ ಯೋಧರಿಂದ ಹತರಾದ ಭಾರತೀಯ ಯೋಧರಿಗೆ ಇತ್ತೀಚೆಗೆ ಪೆರಾಜೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಯುವ ವೇದಿಕೆ, ಪೆರಾಜೆ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡುತ್ತಾ, ಭಾರತ ಮಾತೆಯ ರಕ್ಷಣೆಗೋಸ್ಕರ ಪ್ರಾಣ ಅರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸುವ ಕಾರ್ಯದ ಮೂಲಕ ಆದರೂ ನಾವು ಸೈನಿಕರ ಋಣ ತೀರಿಸಲು ಪ್ರಯತ್ನಿಸಬೇಕು, ರಾಜಕೀಯ ನಾಯಕರ ಸ್ವಾರ್ಥಕ್ಕೆ ಯೋಧರನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಶ್ರೀ ಗಣೇಶ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ ಮಾತನಾಡಿ ಶತ್ರು ರಾಷ್ಟ್ರ ವಾದ ಚೀನಾದ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಆ ಮೂಲಕ ಯೋಧರಿಗೆ ನೈತಿಕ ಬೆಂಬಲ ನೀಡುವಂತೆ ಹೇಳಿದರು. ಸಭೆಯಲ್ಲಿ ವಿಟ್ಲ ತಾಲೂಕು ವಿಶ್ವ ಹಿಂದೂ ಪರಿಷತ್ ನ ಉಪಾಧ್ಯಕ್ಷರಾದ ಲೋಹಿತ್ ಪನೋಲಿಬೈಲ್, ಕಾರ್ಯದರ್ಶಿಗಳಾದ ದೀಪಕ್ ಸಜೀಪ, ಮಾಜಿ ಸೈನಿಕ ರಾದ ಮಾಧವ ಕುಲಾಲ್ ಪಾಳ್ಯ, ಯುವ ವೇದಿಕೆ ಅಧ್ಯಕ್ಷ ನಿತಿನ್ ಅರ್ಬಿ ಉಪಸ್ಥಿತರಿದ್ದರು.‌ಯತಿರಾಜ್ ಪೆರಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.