ಆಪಲ್ ಅಪ್ಲಿಕೇಷನ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ನಿಂದ ಟಿಕ್ ಟಾಕ್ ಹಾಗೂ ಹೆಲೋ ಅಪ್ಲಿಕೇಷನ್ ಔಟ್..! ; ಮೋದಿ ಸರಕಾರದ ನಡೆದ ಸಾಥ್ ನೀಡಿದ ಬಹುರಾಷ್ಟ್ರೀಯ ಕಂಪನಿಗಳು – ಕಹಳೆ ನ್ಯೂಸ್
ನವದೆಹಲಿ: ಟಿಕ್ ಟಾಕ್ ಹಾಗೂ ಹೆಲೋ ಅಪ್ಲಿಕೇಷನ್ ಅನ್ನು ಭಾರತದಲ್ಲಿ ಆಪಲ್ ಅಪ್ಲಿಕೇಷನ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆಯಲಾಗಿದೆ.
ಚೀನಾದೊಂದಿಗೆ ತಳುಕು ಹಾಕಿಕೊಂಡ ಟಿಕ್ ಟಾಕ್ ಹಾಗೂ ಯುಸಿ ಬ್ರೌಸರ್ ಸೇರಿ 59 ಅಪ್ಲಿಕೇಷನ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಈಗಾಗಲೇ ಟಿಕ್ ಟಾಕ್ ಅಪ್ಲಿಕೇಷನ್ ಡೌನ್ ಲೌಡ್ ಮಾಡಿದವರು ಇದನ್ನು ಬಳಸಬಹುದು. ವಿಡಿಯೋ ಪೋಸ್ಟ್ ಮಾಡಬಹುದು.
ಆದರೆ ಕಾನೂನುಬದ್ಧವಾಗಿ ಭಾರತದಲ್ಲಿ ಇದನ್ನು ನಿಷೇಧಿಸಲಾಗಿದೆ. ಭಾರತದ ಭದ್ರತೆ ಹಾಗೂ ಸಮಗ್ರತೆಗೆ ಧಕ್ಕೆ ತರುವುದರಿಂದ ರಕ್ಷಣೆ ಪಡೆಯಲು ಈ ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರ ಆದೇಶ ನೀಡಿದೆ.
ಭಾರತದ ಸುರಕ್ಷತೆ, ಭದ್ರತೆ, ರಕ್ಷಣೆ, ಸಾರ್ವಭೌಮತೆ ಹಾಗೂ ಸಮಗ್ರತೆಗಾಗಿ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿದೆ ಎಂದು ಕಾನೂನು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸೆಕ್ಷನ್ 69A ಅಡಿಯಲ್ಲಿ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧ ಮಾಡಲಾಗಿದೆ.
ನಿಷೇಧವಾಗಿರುವ ಆ್ಯಪ್ ಗಳ ಪಟ್ಟಿ ಇಲ್ಲಿದೆ:
ಟಿಕ್ ಟಾಕ್, ಶೇರ್ ಇಟ್, ಕ್ವಾಯ್ (Kwai), ಯುಸಿ ಬ್ರೌಸರ್, ಬೈಡು, ಶೇನ್, ಕ್ಲಾಶ್ ಆಫ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯುಕ್ಯಾಮ್ ಮೇಕ್‌ಅಪ್, ಎಂಐ ಕಮ್ಯೂನಿಟಿ, ಸಿಎಂ ಬ್ರೊವರ್ಸ್,
ವೈರಸ್ ಕ್ಲೀನರ್, ಎಪಿಯುಎಸ್ ಬ್ರೌಸರ್, ರೋಮ್‌ವಿ, ಕ್ಲಬ್ ಫ್ಯಾಕ್ಟರಿ, ನ್ಯೂಸ್ ಡಾಗ್, ಬ್ಯೂಟಿ ಪ್ಲಸ್, ವಿ ಚಾಟ್, ಯುಸಿ ನ್ಯೂಸ್, ಕ್ಯುಕ್ಯು ಮೇಲ್, ವೆಬಿಯೊ, ಕ್ಸೆಂಡರ್, ಕ್ಯುಕ್ಯು ಮ್ಯೂಸಿಕ್, ಕ್ಯುಕ್ಯು ನ್ಯೂಸ್‌ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್,
ಪ್ಯಾರಲಲ್ ಸ್ಪೇಸ್, ವಿಗೊ ವಿಡಿಯೊ, ನ್ಯೂ ವಿಡಿಯೊ ಸ್ಟೇಟಸ್, ಎಂಐ ವಿಡಿಯೊ ಕಾಲ್ – ಶಿಯಾಮಿ, ವಿಸಿಂಕ್, ಇಎಸ್ ಫೈಲ್ ಎಕ್ಸ್‌ಪ್ಲೋರರ್, ವಿವೊ ವಿಡಿಯೊ – ಕ್ಯುಯು ವಿಡಿಯೊ ಕಂಪನಿ,
ಮೇಟು (Meitu), ಡಿಯು ರೆಕಾರ್ಡರ್, ವಾಲ್ಟ್ – ಹೈಡ್, ಕ್ಯಾಷ್ (Cache) ಕ್ಲೀನರ್ ಡಿಯು ಆಪ್ ಸ್ಟುಡಿಯೊ, ಡಿಯು ಕ್ಲೀನರ್, ಡಿಯು ಬ್ರೌಸರ್, ಹಗೊ ಪ್ಲೇ ವಿತ್ ನ್ಯೂ ಫ್ರೆಂಡ್ಸ್,
ಕ್ಯಾಮ್ ಸ್ಕಾನರ್, ಕ್ಲೀನ್ ಮಾಸ್ಟರ್ – ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೊ ವಂಡರ್, ಕ್ಯುಕ್ಯು ಪ್ಲೇಯರ್, ವಿ ಮೀಟ್, ಸ್ವೀಟ್ ಸೆಲ್ಫಿ, ಬೈಡು ಟ್ರಾನ್ಸ್‌ಲೇಟ್,
ವಿಮೇಟ್, ಕ್ಯುಕ್ಯು ಇಂಟರ್‌ನ್ಯಾಷನಲ್, ಕ್ಯುಕ್ಯು ಸೆಕ್ಯುರಿಟಿ ಸೆಂಟರ್, ಕ್ಯುಕ್ಯು ಲಾಂಚರ್, ಯು ವಿಡಿಯೊ, ವಿ ಫ್ಲೈ ಸ್ಟೇಟಸ್ ವಿಡಿಯೊ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವಸಿ.