Breaking News : ಬೆಂಗಳೂರಿನಲ್ಲಿ 503, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಮಂದಿಗೆ ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿ ಇಂದು ಒಟ್ಟು 947 ಮಂದಿಗೆ ಕೊರೊನಾ ಸೋಂಕು ದೃಢ – ಇಂದು ಒಂದೇ ದಿನ 20 ಮಂದಿ ಬಲಿ – ಕಹಳೆ ನ್ಯೂಸ್
ಬೆಂಗಳೂರು : ಕೊರೊನಾ ವೈರಸ್ ಆರ್ಭಟ ಮುಂದುವರಿದಿದ್ದು, ರಾಜ್ಯದಲ್ಲಿಂದು ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಬರೋಬ್ಬರಿ 15 ಸಾವಿರದ ಗಡಿದಾಟಿದೆ. ಅಲ್ಲದೇ ಕೊರೊನಾ ಸೋಂಕು ಮರಣ ಮೃದಂಗ ಬಾರಿಸಿದ್ದು, ಒಂದೇ ದಿನ ಬರೋಬ್ಬರಿ 20 ಮಂದಿಯನ್ನು ಬಲಿ ಪಡೆದಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಆತಂಕವನ್ನು ತಂದೊಡ್ಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿಂದು ಕೂಡ ಬರೋಬ್ಬರಿ 503 ಮಂದಿಗೆ ಕೊರೊನಾ ಸೋಂಕು ಹರಡುತ್ತಿದ್ದು, ಮಿಂಚಿನ ವೇಗದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಇದುವರೆಗೆ ಬೆಂಗಳೂರಲ್ಲಿ 4,555 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇನ್ನು ಬಳ್ಳಾರಿ ಜಿಲ್ಲೆಗೆ ಜಿಂದಾಲ್ ಕಾರ್ಖಾನೆ ಕೊರೊನಾ ಸ್ಪ್ರೆಡ್ಡರ್ ಆಗಿ ಮಾರ್ಪಡುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿಂದು 61 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಒಂದೇ ದಿನ 6 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಅಲ್ಲದೇ ಕರಾವಳಿಯ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕು ಆತಂಕವನ್ನು ಮೂಡಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಮಂದಿಗೆ ಸೋಂಕು ಕಾಣಿಸಿಕೋಂಡಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 40 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಮಡಿದ್ರೆ, ಉಡುಪಿ ಜಿಲ್ಲೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಉಳಿದಂತೆ ಹಾವೇರಿ 49, ವಿಜಯಪುರ 39, ಶಿವಮೊಗ್ಗ 22, ಬೆಂಗಳೂರು ಗ್ರಾಮಾಂತರ 21, ಬೀದರ್ 17, ಧಾರವಾಡ 17, ಕಲಬುರಗಿ 15, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ 12, ರಾಮನಗರ 12, ಚಿಕ್ಕಮಗಳೂರು 10, ಮೈಸೂರು 9, ಬಾಗಲಕೋಟೆಯಲ್ಲಿ 4, ಕೊಡಗಿನಲ್ಲಿ 4, ಕೋಲಾರ 3, ಚಿತ್ರದುರ್ಗ 2, ಯಾದಗಿರಿ 2, ಮಂಡ್ಯ 2, ಗದಗ 2 ಹಾಗೂ ತುಮಕೂರಲ್ಲಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15,242 ಕ್ಕೆ ಏರಿಕೆಯಾಗಿದೆ.