Monday, November 25, 2024
ಸುದ್ದಿ

ರಾಷ್ಟ್ರೀಯ ವೈದ್ಯರ ದಿನಾಚರಣೆ: ಪ್ರಧಾನಿ ಮೋದಿ, ವೆಂಕಯ್ಯ ನಾಯ್ಡು ಸೇರಿ ಗಣ್ಯಾತಿಗಣ್ಯರಿಂದ ವೈದ್ಯ ಸಮೂಹಕ್ಕೆ ಧನ್ಯವಾದ-ಕಹಳೆ ನ್ಯೂಸ್

New Delhi, April 03 (ANI): Prime Minister Narendra Modi addresses the nation on COVID-19 via a video message, in New Delhi onFriday. PM Modi urged people to switch off lights of their homes at 9 pm for nine minutes on April 5 and light up lamps, candles, mobile flashlights to display the nation's collective spirit to defeat coronavirus. (ANI Photo)

ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಬುಧವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿ ಗಣ್ಯರು ವೈದ್ಯ ಸಮೂಹಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. 

ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಬುಧವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿ ಗಣ್ಯರು ವೈದ್ಯ ಸಮೂಹಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೋವಿಡ್-19 ವಿರುದ್ಧದ ಉತ್ಸಾಹಭರಿತವಾಗಿ ಹೋರಾಟ ಮಾಡುತ್ತಿರುವ ನಮ್ಮ ವೈದ್ಯರಿಗೆ ಹಾಗೂ ಅವರ ಅಸಾಧಾರಣ ಕಾರ್ಯಕ್ಕೆ ಭಾರತ ವಂದಿಸುತ್ತದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ, ಮಾನವೀಯತೆಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ರಾಷ್ಟ್ರ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯ ದಿನಾಚರಣೆಯ ಶುಭಾಶಯಗಳು. “ಈ ವೈದ್ಯರ ದಿನದಂದು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಪೌರಾಣಿಕ ವೈದ್ಯರಾದ ಡಾ. ಬಿ.ಸಿ.ರಾಯ್ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ, ರಾಯ್ ಅವರು ಭಾರತದ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ. ವೈದ್ಯರ ದಿನದಂದು, ಕೋವಿಡ್-19 ವಿರುದ್ಧದ ಮುಂಚೂಣಿಯಲ್ಲಿರುವ ನಮ್ಮ ಕೆಚ್ಚೆದೆಯ ವೈದ್ಯರಿಗೆ ನಮಸ್ಕರಿಸುತ್ತೇನೆ. ಈ ಸಂಕಷ್ಟದ ಕಾಲದಲ್ಲಿ ರಾಷ್ಟ್ರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಅವರ ಸಂಪೂರ್ಣ ಬದ್ಧತೆ ನಿಜಕ್ಕೂ ಅಸಾಧಾರಣವಾಗಿದೆ. ರಾಷ್ಟ್ರವು ಅವರ ಭಕ್ತಿ ಮತ್ತು ತ್ಯಾಗಕ್ಕೆ ನಮಸ್ಕರಿಸುತ್ತೇವೆಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ, ವೈದ್ಯರ ದಿನದಂದು, ಕೋವಿಡ್-19 ಸಂದರ್ಭದಲ್ಲಿ ಭರವಸೆಯನ್ನು ಮೂಡಿಸಿರುವ ಸಮರ್ಪಿತ ವೃತ್ತಿಪರರಿಗೆ ನಾನು ಅಪಾರ ಕೃತಜ್ಞನಾಗಿದ್ದೇನೆಂದಿದ್ದಾರೆ.