Sunday, November 24, 2024
ಸುದ್ದಿ

Breaking News : ಮಂಗಳೂರಿನ ಶಾಸಕ ಭರತ್ ಶೆಟ್ಟಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90, ಬೆಂಗಳೂರಿನಲ್ಲಿ 889 ಮಂದಿಗೆ ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿಂದು ಒಟ್ಟು 1503 ಮಂದಿಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 1502 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 18016ಕ್ಕೆ ಏರಿಕೆಯಾಗಿದೆ.ಇವರಲ್ಲಿ 8334ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 9406 ಆಗಿದೆ.

ಕೊರೊನಾ ಹೊಡೆತ್ತಕ್ಕೆ ಕರಾವಳಿ ಜಿಲ್ಲೆ ನಲುಗಿ ಹೋಗಿದ್ದು, ಮಂಗಳೂರಿನ ಉತ್ತರದ ಶಾಸಕರೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರ-889, ಮೈಸೂರು – 68, ಬಳ್ಳಾರಿ -65, ಧಾರವಾಡ – 47, ವಿಜಯಪುರ – 39, ರಾಮನಗರ – 39, ಕಲಬುರ್ಗಿ – 38, ಬೀದರ್ – 32, ತುಮಕೂರು – 26, ಶಿವಮೊಗ್ಗ – 23, ಮಂಡ್ಯ – 19, ಉತ್ತರ ಕನ್ನಡ – 17, ಹಾಸನ – 15, ಉಡುಪಿ – 14, ಕೋಲಾರ – 12, ರಾಯಚೂರು – 11, ಬಾಗಲಕೋಟೆ – 10, ದಾವಣಗೆರೆ – 8, ಯಾದಗರಿ ಮತ್ತು ಬೆಳಗಾವಿ – 07, ಕೊಡಗು – 06, ಬೆಂಗಳೂರು ಗ್ರಾಮಾಂತರ – 05, ಹಾವೇರಿ ಮತ್ತು ಕೊಪ್ಪಳ – 04, ಚಿತ್ರದುರ್ಗ – 03, ಗದಗ – 2, ಚಿಕ್ಕಬಳ್ಳಾಪರು ಮತ್ತು ಚಾಮರಾಜನಗರ – 01 ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ಇಂದು 1502 ಜನರಿಗೆ ಕೊರೋನಾ ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 18016ಕ್ಕೆ ಏರಿಕೆಯಾದ್ರೇ, 8334 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 9406 ಆಗಿದೆ.

ರಾಜ್ಯದಲ್ಲಿ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 19 ಜನರು ಸಾವನ್ನಪ್ಪುವ ಮೂಲಕ, ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 272ಕ್ಕೆ ಏರಿಕೆಯಾಗಿದೆ.