Sunday, January 19, 2025
ಸುದ್ದಿ

Breaking News : ಶಾಸಕರ ನಂತರ ಸಂಸದರನ್ನೂ ಬಿಡದ ಕೊರೊನಾ ಸೋಂಕು ; ಬಿಜೆಪಿ ಸಂಸದೆಗೂ ಕೊರೊನಾ ಪಾಸಿಟಿವ್..!! – ಕಹಳೆ ನ್ಯೂಸ್

ಮಂಗಳೂರು : ನಿನ್ನೆಯಷ್ಟೇ ಮಂಗಳೂರಿನ ಶಾಸಕ‌ ಭರತ್‌ ಶೆಟ್ಟಿಯವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು‌ ಸಂಸದೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿರುವ ವರದಿಯಾಗಿದೆ. ಕೊರೊನಾ ವೈರಸ್ COVID-19 ಸೋಂಕಿಗೆ ತಾನು ಸಿಲುಕಿರುವುದಾಗಿ ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಹೂಗ್ಲಿ ಸಂಸದೆ ಲಾಕೆಟ್ ಚಟರ್ಜಿ ತಿಳಿಸಿದ್ದಾರೆ.

ಶುಕ್ರವಾರ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಚಟರ್ಜಿ ಅವರು ಶುಕ್ರವಾರ ಬೆಳಿಗ್ಗೆ ತನಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ತನಗೆ ಲಘು ಜ್ವರವಿದೆ ಮತ್ತು ಕಳೆದ ಒಂದು ವಾರದಿಂದ ಸ್ವಯಂ ಪ್ರತ್ಯೇಕತೆಯಲ್ಲಿದ್ದೇನೆ ಎಂದು ಸಂಸದೆ ಹೇಳಿದರು. “ನಾನು ಇಂದು ಬೆಳಿಗ್ಗೆ COVID-19 ಗೆ ಪಾಸಿಟಿವ್ ಪರೀಕ್ಷೆ ಮಾಡಿದ್ದೇನೆ, ಲಘು ಜ್ವರದಿಂದ ಬಳಲುತ್ತಿದ್ದೇನೆ ಮತ್ತು ಕಳೆದ ಒಂದು ವಾರದಿಂದ ಸ್ವಯಂ-ಪ್ರತ್ಯೇಕತೆಯಲ್ಲಿದ್ದೆ. ಎಲ್ಲವೂ ಚೆನ್ನಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು