Sunday, January 19, 2025
ದಕ್ಷಿಣ ಕನ್ನಡಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ; ಇಂದು ಒಂದೇ ದಿನ ಮೂವರ ಬಲಿ ಪಡೆದ ಕೊರೋನಾ..! – ಕಹಳೆ ನ್ಯೂಸ್

ಮಂಗಳೂರು, ಜು 04 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಜು.04 ರ ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ ಮೂವರು ಕೊರೋನಾದಿಂದ ಬಲಿಯ್ತಾಗಿದ್ದಾರೆ.

ಇಂದು ಬೆಳಗ್ಗೆ ಸುಳ್ಯ ತಾಲೂಕಿನ ಕೆರೆಮೂಲೆ ನಿವಾಸಿ ವೃದ್ದೆ ಕೊರೊನಾಗೆ ಬಲಿಯಾಗಿದ್ದರು. ಇದೀಗ ಮತ್ತೆ ಇಬ್ಬರು ಸೇರಿ ಇಂದು ಒಟ್ಟು ಮೂವರು ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 97ಪ್ರಕರಣ ದೃಡಪಟ್ಟಿತ್ತು. ಶುಕ್ರವಾರ ಜಿಲ್ಲಾಡಳಿತ ಬಿಡುಗಡೆ ಮಾಡಿದ ವರದಿಯಂತೆ ಸೋಂಕಿತರ ಸಂಖ್ಯೆ 1010 ಕ್ಕೆ ಏರಿಕೆ ಕಂಡಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು