ಪಂಜ: ಪಲ್ಲೋಡಿ ಕಾಲೋನಿಯಲ್ಲಿ 4 ದಿನದಿಂದ ಮಲಗಿದ್ದಲ್ಲೇ ಇದ್ದು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪಂಜ ಗ್ರಾಮಪಂಚಾಯತ್ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಮತ್ತು ಸಿಬ್ಬಂದಿಗಳು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಂಜದ ಪಲ್ಲೋಡಿ ಕಾಲಾನಿಯಲ್ಲಿರುವ ಮನೆಯೊಂದರಲ್ಲಿ 4 ದಿನದಿಂದ ರಾಜು ಎಂಬುವರು ಮಲಗಿದ್ದಲ್ಲೇ ಇರುವುದನ್ನು ಸ್ಥಳೀಯ ಪಂಚಾಯತ್ ಮಾಜಿ ಸದಸ್ಯೆ ನಿರ್ಮಲ ಗಮನಿಸಿ ಪಂಚಾಯತ್ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕೂಡಲೇ ಸ್ಪಂದಿಸಿದ ಆಡಳಿತಾಧಿಕಾರಿ ದೇವಿಪ್ರಸಾದ್ ಕಾನತ್ತೂರು ಪಂಜ ಸರಕಾರಿ ಆಸ್ಪತ್ರೆ ವೈಧ್ಯರಿಗೆ ತಿಳಿಸಿದ್ದಾರೆ. ಪಿಡಿಓ ಪುರುಷೊೀತ್ತಮ ಎಂ. , ಡಾ. ಮಂಜುನಾಥ್ ಜೊತೆ ಸ್ಥಳಕ್ಕೆ ತೆರಳಿ ಅಸೌಖ್ಯದಿಂದ ಮಲಗಿದ್ದವನನ್ನ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ