Sunday, January 19, 2025
ಸುದ್ದಿ

ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ತುರ್ತು ಸ್ಥಳಾಂತರ-ಕಹಳೆ ನ್ಯೂಸ್

ಮಂಗಳೂರು: ನಗರದ ಕದ್ರಿ ಬಳಿಯ ತೇಜಸ್ವಿನಿ ಆಸ್ಪತ್ರೆಯಲ್ಲಿ ರವಿವಾರ ಬೆಂಕಿ ಅವಘಡ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಕೂಡಲೇ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗಿದೆ.

ಆಸ್ಪತ್ರೆಯ ಎಂಆರ್ ಐ ಸ್ಕ್ಯಾನಿಂಗ್ ಕೊಠಡಿಯ ಬಳಿ ಶಾರ್ಟ್ ಸರ್ಕ್ಯೂಟ್ ಆಗಿ ಹತ್ತಿರದ ಬ್ಯಾಟರಿಗೆ ಬೆಂಕಿ ತಗುಲಿದೆ. ಕಟ್ಟಡದ ಕೆಳ ಅಂತಸ್ತಿನ ಮಾಳಿಗೆ ತುಂಬಾ ಹೊಗೆ ಆವರಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸ್ಪತ್ರೆಯ ಮೇಲಿನ ಅಂತಸ್ತಿನಲ್ಲಿದ್ದ ಸುಮಾರು 20 ರೋಗಿಗಳನ್ನು ಅದೇ ಆಸ್ಪತ್ರೆಯ ಇನ್ನುಂದು ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಪಾಂಡೇಶ್ವರ ಹಾಗೂ ಕದ್ರಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.