Sunday, January 19, 2025
ಪುತ್ತೂರುಸುದ್ದಿ

” ಇಂಗು ತಿಂದ ಮಂಗನಂತಾದ ಮೊಹಮದ್..!? ” – ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಾ ಸಂದೇಶ ರವಾನಿಸಿದ್ದಾರೆಂದು ಆರೋಪಿಸಿದ್ದ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯರ ವಿರುದ್ಧ ಎಸ್.ಡಿ.ಪಿ.ಐ.ಯ ಮುಖಂಡನ ಖಾಸಗಿ ದೂರು ಅರ್ಜಿಯನ್ನು ಸ್ವಯಂ ಪ್ರೇರಿತರಾಗಿ ವಜಾಗೊಳಿಸಿದ ನ್ಯಾಯಾಧೀಶರು – ಕಹಳೆ ನ್ಯೂಸ್

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಸಂದೇಶ ರವಾನಿಸಿದ ಡಾ.ಸುರೇಶ್ ಪುತ್ತೂರಾಯರವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಪುರುಷರಕಟ್ಟೆಯ ಪಿ.ಬಿ.ಕೆ. ಮೊಹಮ್ಮದ್ ಎಂಬವರು ವಕೀಲ ಅಬ್ದುಲ್ ಮಜೀದ್ ಖಾನ್‌ರವರ ಮೂಲಕ ಸಲ್ಲಿಸಿದ್ದ ಖಾಸಗಿ ದೂರನ್ನು ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್‌ರವರು ವಜಾಗೊಳಿಸಿ ಜುಲೈ 3ರಂದು ಆದೇಶ ನೀಡಿದ್ದಾರೆ.

ಸ್ವಯಂಪ್ರೇರಿತರಾಗಿ ಅರ್ಜಿ ವಜಾಗೊಳಿಸಿದ ನ್ಯಾಯಾಧೀಶರು :

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್‌ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯರವರು `ಪ್ರೀತಿಯ ಕೊರೋನಾ, ಹೇಗಿದ್ದರೂ ಭಾರತಕ್ಕೆ ಬಂದು ಬಿಟ್ಟಿದ್ದೀಯಾ, ಮೋದಿ ವಿರೋಧಿಗಳನ್ನು ಒಂದು ಸಲ ಭೇಟಿ ಮಾಡಿ ಹೋಗು, ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ’ ಎಂದು ಸಂದೇಶ ಫಾರ್ವರ್ಡ್ ಮಾಡಿದ್ದಾರೆ, ಈ ಮೂಲಕ ಕೋಮು ಪ್ರಚೋದನೆ ಮಾಡಿದ್ದಾರೆ ಅಲ್ಲದೆ, ಪರಸ್ಪರ ಪಂಗಡಗಳನ್ನು ಎತ್ತಿ ಕಟ್ಟುವ ಹುನ್ನಾರ ನಡೆಸಿದ್ದಾರೆ, ಆದ್ದರಿಂದ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 153-ಎ, 153-ಬಿ, 295, 295(ಎ), 505(1)ಸಿ ಮತ್ತು 66 ಎ ಮತ್ತು 67 ಇನ್ಫರ್‍ಮೇಷನ್ ಟೆಕ್ನಾಲಜಿ ಆಕ್ಟ್‌ನಡಿ ಕೇಸು ದಾಖಲಿಸಿಕೊಳ್ಳುವಂತೆ ನರಿಮೊಗ್ರು ಗ್ರಾಮದ ಪುರುಷರಕಟ್ಟೆಯ ಬಿ. ಇಬ್ರಾಹಿಂ ಎಂಬವರ ಪುತ್ರ ಪಿ.ಬಿ.ಕೆ. ಮೊಹಮ್ಮದ್ ಎಂಬವರು ವಕೀಲ ಅಬ್ದುಲ್ ಮಜೀದ್ ಖಾನ್‌ರವರ ಮೂಲಕ ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯಕ್ಕೆ ಜೂನ್ 29ರಂದು ಖಾಸಗಿ ದೂರು ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೂರುದಾರ ಮೊಹಮ್ಮದ್‌ರವರು ಎಸ್‌ಡಿಪಿಐ ಪಕ್ಷದ ಸದಸ್ಯರಾಗಿದ್ದಾರೆ, ವೈದ್ಯರಾಗಿರುವ ಡಾ.ಸುರೇಶ್ ಪುತ್ತೂರಾಯರವರು `ಪ್ರೀತಿಯ ಕೊರೋನಾ, ಹೇಗಿದ್ದರೂ ಭಾರತಕ್ಕೆ ಬಂದು ಬಿಟ್ಟಿದ್ದೀಯಾ, ಮೋದಿ ವಿರೋಧಿಗಳನ್ನು ಒಂದು ಸಲ ಭೇಟಿ ಮಾಡಿ ಹೋಗು, ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ’ ಎಂದು ಸಂದೇಶ ಫಾರ್ವರ್ಡ್ ಮಾಡಿದ್ದಾರೆ. ಈ ಸಂದೇಶ ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮೂಲಕ ಫಾರ್ವರ್ಡ್ ಆಗಿರುತ್ತದೆ, ಭಾರತೀಯ ಜನತಾ ಪಾರ್ಟಿಯವರಾಗಿದ್ದು ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರ ರಾಜಕೀಯ ಕಾರಣಕ್ಕೆ ವಿರೋಧಿಗಳಾಗಿರುವ ಎಸ್‌ಡಿಪಿಐ ಪಕ್ಷದಲ್ಲಿರುವ ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕ್ರೈಸ್ತರು ಇತ್ಯಾದಿ ಹಿಂದುಳಿದ ವರ್ಗದವರಿಗೆ ಕೊರೋನಾ ಬರಲಿ ಎಂದು ಸಂದೇಶ ಫಾರ್ವರ್ಡ್ ಮಾಡುವ ಮೂಲಕ ಸಾಮಾಜಿಕ ಆರೋಗ್ಯ ಹದಗೆಡಲು ಮತ್ತು ಕೋಮು ಹಿಂಸೆ ಉಂಟಾಗಲು ಕಾರಣಕರ್ತರಾಗಿದ್ದಾರೆ, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಆದ್ದರಿಂದ ನ್ಯಾಯಾಲಯ ಖಾಸಗಿ ದೂರನ್ನು ಸ್ವೀಕರಿಸಿ ತನಿಖೆ ನಡೆಸಲು ಪೊಲೀಸರಿಗೆ ಆದೇಶ ನೀಡಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಖಾಸಗಿ ದೂರನ್ನು ಸ್ವಯಂಪ್ರೇರಿತವಾಗಿ ವಜಾಗೊಳಿಸಿದ ನ್ಯಾಯಾಧೀಶ ಮಂಜುನಾಥ್‌ರವರು ಆರೋಪಿಯು ಈ ರೀತಿಯ ಸಂದೇಶ ರವಾನೆ ಮಾಡಿರುವುದು ತಮ್ಮನ್ನು ಉದ್ದೇಶಿಸಿಯೇ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ಯಾರನ್ನೋ ಉದ್ದೇಶಿಸಿ ರವಾನಿಸಿದ ಸಂದೇಶಗಳನ್ನು ದೂರುದಾರರನ್ನುದ್ದೇಶಿಸಿಯೇ ಹೇಳಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ, ಯಾರು ಸಂದೇಶ ಸೃಷ್ಠಿಸಿದ್ದಾರೆಯೋ ಅವರನ್ನು ನೀವು ಆರೋಪಿಯನ್ನಾಗಿಸಿಲ್ಲ, ಫಾರ್ವರ್ಡ್ ಮಾಡಿದವರನ್ನು ಮಾತ್ರ ಆರೋಪಿ ಎಂದು ಹೆಸರಿಸಲಾಗಿದೆ, ಇದೊಂದು ರಾಜಕೀಯ ಪ್ರೇರಿತ ದೂರು ಎಂದು ಕಂಡು ಬಂದಿದೆ, ಮುಖ್ಯವಾಗಿ ಶ್ರೇಯಾ ಸಿಂಘಾಲ್ ಮತ್ತು ಭಾರತ ಸರಕಾರದ ನಡುವಿನ ವ್ಯಾಜ್ಯದ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಈಗಾಗಲೇ ಮಾಹಿತಿ ಮತ್ತು ತಂತ್ರಜ್ಞಾನದ 66ಎ ಮತ್ತು 67ನ್ನು ರದ್ದು ಮಾಡಿದೆ, ಹಾಗಾಗಿ ಈ ಆಕ್ಟ್‌ನಡಿ ಇಂತಹ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಾಗದು ಎಂದು ತೀರ್ಪು ನೀಡಿದೆ, ಆದ್ದರಿಂದ ಈ ದೂರು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಆದೇಶ ನೀಡಿದ್ದಾರೆ. ಮೇಲ್ನೋಟಕ್ಕೆ ದೂರು ಸ್ವೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಏಕಪಕ್ಷೀಯ ವಾದವನ್ನಾಲಿಸಿ ಪರಸ್ಪರ ವಾದ-ಪ್ರತಿವಾದ ನಡೆಯದೆ ನ್ಯಾಯಾಧೀಶರೇ ಸ್ವಯಂಪ್ರೇರಿತರಾಗಿ ದೂರು ಅರ್ಜಿಯನ್ನು ವಜಾಗೊಳಿಸಿರುವುದು ಅಪರೂಪದ ವಿದ್ಯಮಾನ ಎಂದು ವಕೀಲರ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಡಾ. ಸುರೇಶ್ ಪುತ್ತೂರಾಯರ ಪರ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಕಾಲತ್ತು ವಹಿಸಿದ್ದರು.