ದಕ್ಷಿಣ ಕನ್ನಡ ಜಿಲ್ಲೆಗೆ ವಿಷಮ ಆದಿತ್ಯವಾರ ; ಇಂದು ಒಂದೇ ದಿನ 147 ಮಂದಿಯಲ್ಲಿ ಕೊರೊನಾ ಪಾಸಿಟಿವ್ – 38 ಮಂದಿ ಗುಣಮುಖ – ಕಹಳೆ ನ್ಯೂಸ್
ಮಂಗಳೂರು, ಜು. 05 : ದ.ಕ. ಜಿಲ್ಲೆಯಲ್ಲಿ ರವಿವಾರ ಒಂದೇ ದಿನ ಬರೋಬ್ಬರಿ 147 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 1232ಕ್ಕೆ ಏರಿಕೆಯಾಗಿದೆ.
ರವಿವಾರದಂದು ಒಟ್ಟು 378 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು ಈ ಪೈಕಿ 231 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನು ರವಿವಾರದಂದು ಜಿಲ್ಲೆಯಲ್ಲಿ 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ 554 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 666 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ನಡುವೆ 576 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. 75 ಮಂದಿಯನ್ನು ನಿಗಾ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ 10 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ಪತ್ತೆಯಾದ ಪ್ರಕರಣಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 35 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 40 ಮಂದಿಯಲ್ಲಿ ಐಎಲ್ ಐ ಪ್ರಕರಣ ದಾಖಲಾಗಿದೆ. ಇಬ್ಬರಲ್ಲಿ ಸಾರಿ ಪ್ರಕರಣಗಳು ಪತ್ತೆಯಾಗಿವೆ. ರ್‍ಯಾಂಡಮ್ ಪರೀಕ್ಷೆಯಲ್ಲಿ 48 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರಲ್ಲಿ ಪ್ರಿ ಸರ್ಜರಿ ಪ್ರಕರಣಾಗಳು ಪತ್ತೆಯಾಗಿವೆ. ಸೌದಿ, ಮಸ್ಕತ್, ದುಬೈನಿಂದ ಮರಳಿದ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು, ಮುಂಬೈ, ಬಿಹಾರದಿಂದ ಮರಳಿದ ಒಟ್ಟು 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪ್ರಿ ಸರ್ಜರಿ ಸ್ಯಾಂಪಲ್ ಬಿಫೋರ್ ಡೆಲಿವರಿ ಇಬ್ಬರಲ್ಲಿ, ಪ್ರಿ ಸರ್ಜರಿ ಸ್ಯಾಂಪಲ್ ಬಿಫೋರ್ ಸರ್ಜರಿ ಒಬ್ಬರಲ್ಲಿ, ಪ್ರಿ ಸರ್ಜರಿ ಸ್ಯಾಂಪಲ್ ಬಿಫೋರ್ ಬಯೋಪ್ಸಿ ಒಬ್ಬರಲ್ಲಿ ಹಾಗೂ ಹಡಗಿನ ಮೂಲಕ ಮಲೇಶ್ಯಾದಿಂದ ಮರಳಿದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.