Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

Breaking News : ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ ಪುತ್ತೂರಿನ ಸೋಂಕಿತ ಪರಾರಿ – ಕಹಳೆ ನ್ಯೂಸ್

ಮಂಗಳೂರು : ಪುತ್ತೂರು ಮೂಲದ ವ್ಯಕ್ತಿ ಸ್ವಇಚ್ಛೆಯಿಂದ ಜುಲೈ 1ರಂದು ಕೋವಿಡ್ 19 ರೋಗ ಲಕ್ಷಣಗಳು ಇದೆ ಎಂಬ ಕಾರಣ ಆಸ್ಪತ್ರೆಗೆ ಬಂದಿದ್ದವನನ್ನು ವಾರ್ಡ್ ಒಂದರಲ್ಲಿ ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಜುಲೈ ೫ರಂದು ಈತನಿಗೆ ಕೋವಿಡ್ 19 ಇರುವುದು ದೃಢ ಪಟ್ಟಿದೆ‌. ನಂತರ ಸುಮಾರು 4 ಗಂಟೆಯ ಸಮಯ ವೆನ್ ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಈತನ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ‌. ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದರೆ ಮತ್ತು ಎಲ್ಲಿಯಾದರೂ ಕಂಡು ಬಂದರೆ ನಗರ ಪೊಲೀಸ್ ಕಂಟ್ರೋಲ್ ನಂಬರ್ 9480802300 ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ 0824 2220530 ಈ ನಂಬರ್ ಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

18 ವರ್ಷದ ಸೋಂಕಿತ ಮೂಲತಃ ಪುತ್ತೂರು ದರ್ಬೆ ನಿವಾಸಿ ನಿವಾಸಿಯಾಗಿದ್ದು ಮಂಗಳೂರಿನ ಅಜ್ಜಿ ಮನೆಯಲ್ಲಿ ಬಂದು ವಾಸ್ತವ್ಯ ಹೂಡಿದ್ದ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು