Wednesday, April 2, 2025
ದಕ್ಷಿಣ ಕನ್ನಡಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಇಂದು ಒಂದೇ ದಿನ ಎರಡು ಸಾವು ; ಉಳ್ಳಾಲದ‌ 50 ವರ್ಷದ ಮಹಿಳೆ ಹಾಗೂ ಮಂಗಳೂರಿನ 52 ವರ್ಷದ ಪುರುಷ ಕೊರೊನಾಗೆ ಬಲಿ – 10 ಮಂದಿ ಐಸಿಯೂನಲ್ಲಿ – ಕಹಳೆ ನ್ಯೂಸ್

ಮಂಗಳೂರು: ದ.ಕದಲ್ಲಿ ಕೊರೊನಾಗೆ ಮತ್ತೊಂದು‌ ಸಾವು‌ ಸಂಭವಿಸಿ ಸಾವಿನ‌ ಸಂಖ್ಯೆ‌ 24 ಕ್ಕೆ ಏರಿದೆ. ಉಳ್ಳಾಲದ 50 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ.

ಇದಕ್ಕಿಂತ ಸ್ವಲ್ಪ ಮುಂಚೆ ಮಂಗಳೂರು ಹೊರಲಯದ ಸಂತೋಷ್ ನಗರ ನಿವಾಸಿ ಇಂದು ಸಾವನ್ನಪ್ಪಿದ್ದಾರೆ. 52 ವರ್ಷ ಪ್ರಾಯದ ಅವರು ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಭಾರಿ ವೇಗದಲ್ಲಿ ಏರಿಕೆ ಕಾಣುತ್ತಿದೆ. ರವಿವಾರ ಒಂದೇ ದಿನ ಜಿಲ್ಲೆಯಲ್ಲಿ 147 ಮಂದಿ ಹೊಸ ಸೋಂಕಿತರ ಕಂಡುಬಂದಿದ್ದರು. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1234ಕ್ಕೆ ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೈಕಿ ೧೦ ಮಂದಿ ಐಸಿಯೂನಲ್ಲಿ ಚಿಕಿತ್ಸೆ‌ಪಡೆಯುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ