Sunday, January 19, 2025
ಕಾಸರಗೋಡುಮಂಜೇಶ್ವರಸುದ್ದಿ

ಕುಂಬಳೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಮನೆಯಲ್ಲಿತ್ತು 4 ಕೆ.ಜಿ ಗಾಂಜಾ ; ಆರೋಪಿ ಮುಹಮ್ಮದ್ ಬಾತಿಷಾ ಅಂದರ್ – ಕಹಳೆ ನ್ಯೂಸ್

ಕುಂಬಳೆ, ಜು 06 : ನಾಲ್ಕು ಕಿಲೋ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ . ಬಂಧಿತನನ್ನು ಬಂದ್ಯೋಡು ಅಡ್ಕದ ಬಾಡಿಗೆ ಕಟ್ಟಡದಲ್ಲಿ ವಾಸವಾಗಿರುವ ಕುಕ್ಕಾರು ಮೂಲದ ಮುಹಮ್ಮದ್ ಬಾತಿಷಾ (36) ಎಂದು ಗುರುತಿಸಲಾಗಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ 4 ಕೆ.ಜಿ ಗಾಂಜಾವನ್ನು ಬಚ್ಚಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದು ಕಾರ್ಯಾಚರಣೆ ವೇಳೆ ಬಚ್ಚಿಡಲಾಗಿದ್ದ 4 ಕೆ. ಜಿ ಗಾಂಜಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಂಬಳೆ ಸಬ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು