Sunday, January 19, 2025
ಸುದ್ದಿ

ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಶನ್ ವತಿಯಿಂದ ವನಮಹೋತ್ಸವ ಪ್ರಯುಕ್ತ ಸಾರ್ವಜನಿಕ ಉಚಿತ ಸಸಿ ವಿತರಣೆ- ಕಹಳೆ ನ್ಯೂಸ್

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಡಿವಿಶನ್ ಇದರ ವತಿಯಿಂದ ವನಮಹೋತ್ಸವದ ಪ್ರಯುಕ್ತ ಸಾರ್ವಜನಿಕ ಉಚಿತ ಸಸಿ ವಿತರಣಾ ಕಾರ್ಯಕ್ರಮ ಡಿವಿಶನ್ ಅಧ್ಯಕ್ಷ ಎಫ್.ಎಚ್ ಮಿಸ್ಬಾಹಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸುನ್ನೀ ಕೋ ಆರ್ಡಿನೇಶನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಮೂಡಡ್ಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್ಸೆಸ್ಸೆಫ್ಫ್ ಜಿಲ್ಲಾ ಕೋಶಾಧಿಕಾರಿ ಅಲೀ ತುರ್ಕಳಿಕ್ಕೆ, ಮಸೂದ್ ಸಅದಿ, ರಫೀಕ್ ಅಹ್ಸನಿ, ಶರೀಫ್ ಸಖಾಫಿ ಆಶಂಷಾ ಭಾಷಣ ಮಾಡಿದರು.ಎಸ್. ವೈ.ಎಸ್ ಉಪ್ಪಿನಂಗಡಿ ಸೆಂಟರ್ ಇದರ ಅಧ್ಯಕ್ಷ ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು ಸಭೆಯಲ್ಲಿ ದುಆಶಿರ್ವಚನ ನಡೆಸಿದರು.ನಂತರ ಉಪ್ಪಿನಂಗಡಿ ಪೊಲೀಸ್ ವರಿಷಾ್ಟಧಿಕಾರಿಗಳಿಗೆ ಸಸಿನೀಡಿ ಕಾರ್ಯಕ್ರಮವನ್ನು ಚಾಲನೆಗೊಳಿಸಿ, ಉಪ್ಪಿನಂಗಡಿ ಆಸುಪಾಸಿನ ಸಾರ್ವಜನಿಕರಿಗೆಲ್ಲಾ ಸುಮಾರು 12 ಬಗೆಯ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ಫ್ ಜಿಲ್ಲಾ ಸದಸ್ಯ ಹಕೀಂ ಕಳಂಜಿಬೈಲು ಕೆ.ಸಿ.ಎಫ್ ನಾಯಕ ಅಶ್ರಫ್ ಸಖಾಫಿ ಕರ್ಪಾಡಿ,ಡಿವಿಷನ್ ಪ್ರ. ಕಾರ್ಯದರ್ಶಿ ಮುಸ್ತಫಾ ಯು.ಪಿ, ರಹ್ಮಾನ್ ಪದ್ಮುಂಜ ಉಪಸ್ಥಿತರಿದ್ದರು