Sunday, January 19, 2025
ಕಾಸರಗೋಡುರಾಜಕೀಯಸುದ್ದಿ

ರಾತ್ರೋರಾತ್ರಿ ಕೇರಳ ರಾಜಕೀಯದಲ್ಲಿ ಭಾರಿ ತಲ್ಲಣ ; ಪಿನರಾಯಿ ಬುಡ ಅಲುಗಾಡಿಸಿದ ಈ ಚೆಲುವೆ..! ಉರುಳುತ್ತಾ ಕೇರಳ ಸರ್ಕಾರ..? – ಕಹಳೆ ನ್ಯೂಸ್

ತಿರುವನಂತಪುರದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನ ನಿನ್ನೆ ಪತ್ತೆಯಾಗಿತ್ತು. ಇದರ ಹಿಂದೆ ಒಬ್ಬ ಪ್ರಭಾವಿ ಮಹಿಳೆಯ ಕೈವಾಡ ಇರುವುದು ಇದೀಗ ಬೆಳಕಿಗೆ ಬಂದಿದೆ. ರಾಜತಾಂತ್ರಿಕ ರಕ್ಷಣೆ ಹೊಂದಿದ್ದ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’ನಲ್ಲಿ ಈ ಚಿನ್ನ ಸಿಕ್ಕಿತ್ತು. ಇದನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ಇಲ್ಲಿಗೆ ಹೇಗೆ ಬಂತು? ಅದೂ ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌ನಲ್ಲಿ ಇದು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಇದರ ಹಿಂದಿರುವುದು ಒಬ್ಬ ಮಹಿಳೆ ಎಂಬುದು ಬಹಿರಂಗವಾಗಿದೆ. ಸದ್ಯ ಇದು ಭಾರೀ ಸಂಚಲನ ಸೃಷ್ಟಿಸಿದ್ದು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ವನ್ನೇ ಅಲುಗಾಡಿಸುತ್ತಿದೆ. ಕೇರಳದ ಬಹುತೇಕ ರಾಜಕಾರಣಿಗಳ ಬಾಯಲ್ಲಿ ಕೇಳಿ ಬರುವ ಈಸುಂದರಿಯ ಹೆಸರು ಸ್ವಪ್ನಾ ಸುರೇಶ್ ..!

ಜಾಹೀರಾತು
ಜಾಹೀರಾತು
ಜಾಹೀರಾತು

ಚಿನ್ನದ ಕಳ್ಳಸಾಗಣೆಯಲ್ಲಿ ಸಿಲುಕಿಬಿದ್ದಿರುವುದು ಇದೇ ಸುಂದರಿ. ಈಕೆಯ ಹೆಸರು ನೆನ್ನೆಯ ಪ್ರಕರಣದಲ್ಲಿ ಕೇಳಿಬರುತ್ತಿದ್ದಂತೆಯೇ, ಮುಖ್ಯಮಂತ್ರಿ ಕಾರ್ಯಾಲಯದಿಂದ ದೂರವಾಣಿ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ, ಕಸ್ಟಮ್ಸ್‌ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದು, ಇದೀಗ ಆ ನಿಟ್ಟಿನಲ್ಲಿಯೇ ತನಿಖೆ ಶುರುವಾಗಿದೆ.

ಸ್ವಪ್ನಾ ಸುರೇಶ್ ಅಚ್ಚರಿಯ ರೀತಿಯಲ್ಲಿ ನೆನ್ನೆಯಿಂದ ಕಾಣೆಯಾಗಿದ್ದಾರೆ. ಇವರನ್ನು ಬಂಧನದಿಂದ ತಪ್ಪಿಸುವ ಉದ್ದೇಶದಿಂದ ಪಿಣರಾಯಿ ವಿಜುನ್ ಸರ್ಕಾರವೇ ಉದ್ದೇಶಪೂರ್ವಕಾಗಿ ಸುರಕ್ಷಿತ ಜಾಗದಲ್ಲಿ ರವಾನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ಈ ವಿಚಾರ ಕೇರಳದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.

ಬಿಜೆಪಿಯು ನೇರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮೇಲೆ ಬೊಟ್ಟು ಮಾಡಿದೆ. ಸ್ವಪ್ನಾ ಮುಖ್ಯಮಂತ್ರಿ ಜೊತೆ ಅತ್ಯಂತ ನಿಕಟವಾಗಿರುವ ವಿಷಯ ಇದೀಗ ಗುಟ್ಟಾಗಿ ಉಳಿದಿಲ್ಲ. ಆದ್ದರಿಂದ ಚಿನ್ನದ ಕಳ್ಳವ್ಯವಹಾರದ ಹಿಂದೆ ಸ್ವಪ್ನಾ ಜೊತೆ ಖುದ್ದು ಮುಖ್ಯಮಂತ್ರಿ ಕಾರ್ಯಾಲಯದ ಹೆಸರೂ ಥಳಕು ಹಾಕಿಕೊಂಡಿರುವ ಕಾರಣ ಸದ್ಯ ಪಿಣರಾಯ್‌ ವಿಜಯನ್‌ ಕುರ್ಚಿ ಅಲುಗಾಡುತ್ತಿದೆ.