Sunday, January 19, 2025
ಸುದ್ದಿ

ಉಪ್ಪಿನಂಗಡಿ ಘಟಕಕ್ಕೆ ಹೋಮಿಯೋಪತಿ ಔಷದಿ ಹಾಗೂ ಸ್ಯಾನಿಟೈಸರ್ ವಿತರಣೆ- ಕಹಳೆ ನ್ಯೂಸ್

ಮಂಗಳೂರು:-ಜಿಲ್ಲಾ ಗೃಹರಕ್ಷಕದಳ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಉಪ್ಪಿನಂಗಡಿ ಘಟಕದ ಎಲ್ಲಾ 50 ಗೃಹರಕ್ಷಕರಿಗೆ ಆಯುಷ್ ಇಲಾಖೆ ದ.ಕ ಜಿಲ್ಲೆ ಇವರು ನೀಡಿದ ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಡಗೊಳಿಸುವ ಹೋಮಿಯೋಪತಿ ಔಷದಿಯನ್ನು ದಿನಾಂಕ 7/07/2020ರ ಮಂಗಳವಾರದಂದು ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಔಷದಿಯನ್ನು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್.ಬಿ.ಇವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಉಪ ಸಮಾದೇಷ್ಠರಾದ ರಮೇಶ್,ಉಪ್ಪಿನಂಗಡಿ ಪ್ರವಾಹರಕ್ಷಣಾ ತಂಡದ ಗೃಹರಕ್ಷಕರಾದ ASK ಜನಾರ್ದನ ಆಚಾರ್ಯ,ವಸಂತ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಎಂ.ಸಿ.ಎಪ್ ಇವರ ವತಿಯಿಂದ ನೀಡಲಾದ 50 ಸ್ಯಾನಿಟೈಸರ್ ಉಪ್ಪಿನಂಗಡಿ ಘಟಕದ ಗೃಹರಕ್ಷಕರಿಗೆ ನೀಡಲಾಯಿತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿಡ್-19 ವಾರಿಯರ್ ಆಗಿ ಕೆಲಸ ನಿರ್ವಹಿಸುವ ಗೃಹರಕ್ಷಕರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆಎಂದು ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ತಿಳಿಸಿರುತ್ತಾರೆ