Saturday, November 23, 2024
ಕಾಸರಗೋಡುದಕ್ಷಿಣ ಕನ್ನಡಸುದ್ದಿ

ಅಡಿಕೆ ನಳ್ಳಿ ಬೀಳುವ ಸಮಸ್ಯೆ : ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ಅಡಿಕೆ ತೋಟಗಳಿಗೆ ಭೇಟಿ-ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಅಡಿಕೆ ತೋಟಗಳಲ್ಲಿ ಎಳೆ ಅಡಿಕೆ ಬೀಳುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ಈ ಬಾರಿ ವಿಪರೀತವಾಗಿ ಕಂಡುಬಂದಿತ್ತು. ಕಳೆದ 2 ವರ್ಷಗಳಿಂದ ಈ ಸಮಸ್ಯೆ ಇದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಬಗ್ಗೆ ಸೂಕ್ತವಾದ ಅದ್ಯಯನ ಹಾಗೂ ಪರಿಹಾರ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ತಕ್ಷಣ ಸ್ಪಂದಿಸಿದ ವಿಜ್ಞಾನಿಗಳ ತಂಡ ಶುಕ್ರವಾರ ಸುಳ್ಯ, ಪುತ್ತೂರು, ಕಡಬ ಪ್ರದೇಶದ ಕೆಲವು ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಅಡಿಕೆ ಸ್ಯಾಂಪಲ್ ಗಳು ಹಾಗೂ ಅಧ್ಯಯನ ನಡೆಸಿದ್ದಾರೆ. ವಿಜ್ಞಾನಿಗಳ ತಂಡದಲ್ಲಿ ಸಸ್ಯ ಸಂತಾನೋತ್ಪತ್ತಿ ವಿಜ್ಞಾನಿ ಡಾ. ಎನ್. ಆರ್. ನಾಗರಾಜ, ಕೃಷಿ ಕೀಟಶಾಸ್ತ್ರ ವಿಜ್ಞಾನಿ ಡಾ. ಶಿವಾಜಿ ಹೌಸ್ರಾವ್ ಥೂಬ್, ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾ. ಆರ್. ಥವಾ ಪ್ರಕಾಶ ಪಾಂಡಿಯನ್, ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ಸಂತೋಷ್ ಕುಮಾರ್ ಭಾಗವಹಿಸಿದ್ದರು. ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ, ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮೊದಲಾದವರು ಜೊತೆಗಿದ್ದರು.