Sunday, January 19, 2025
ಸುದ್ದಿ

ಮುತ್ತಪ್ಪ ರೈ ಆಸ್ತಿಯ ಮೂರನೇ ಒಂದು ಭಾಗ ನನಗೆ ಸೇರಬೇಕು ; ಆಸ್ತಿಗಾಗಿ ಕೋರ್ಟ್ ಮೆಟ್ಟಲೇರಿದ ರೈ ಹೊರಹಾಕಿದ್ದ ಎರಡನೇ ಪತ್ನಿ – ಕಹಳೆ ನ್ಯೂಸ್

ಬೆಂಗಳೂರು : ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಭೂಗತ ಲೋಕದ ಮಾಜಿ ಡಾನ್ ಪುತ್ತೂರು ಮೂಲದ ಮುತ್ತಪ್ಪ ರೈ ಆಸ್ತಿಯಲ್ಲಿ ಮೂರನೇ ಒಂದು ಭಾಗ ಹಂಚಿಕೆ ಮಾಡಿಕೊಡಬೇಕು ಎಂದು ಕೋರಿ ಅವರ ಎರಡನೇ ಪತ್ನಿ ಅನುರಾಧಾ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮುತ್ತಪ್ಪ ರೈ ಮಕ್ಕಳಾದ ಮೊದಲ ಪತ್ನಿಯ ಮಕ್ಕಳಾದ ರಾಕಿ ರೈ, ರಿಕ್ಕಿ ರೈ ಸೇರಿ 17 ಮಂದಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಆ.4ಕ್ಕೆ ಮುಂದೂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುತ್ತಪ್ಪ ರೈ ಅವರ ಒಟ್ಟು ಆಸ್ತಿಯಲ್ಲಿ ಮೂರನೇ ಒಂದು ಭಾಗ ನನಗೆ ಸೇರಬೇಕಿದೆ. ಈ ಆಸ್ತಿ ಹಂಚಿಕೆ ಮಾಡಿಕೊಡಲು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಅನುರಾಧ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು