Sunday, January 19, 2025
ದಕ್ಷಿಣ ಕನ್ನಡಶಿಕ್ಷಣಸುದ್ದಿ

ಪುತ್ತೂರು ಪ್ರಗತಿ ಸ್ಟಡಿಸೆಂಟರ್ ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 12 ಆದಿತ್ಯವಾರದಿಂದ ಆನ್‍ಲೈನ್ ಶಿಕ್ಷಣ ಆರಂಭ-ಕಹಳೆ ನ್ಯೂಸ್

 

covid-19ರ ಆತಂಕದ ನಡುವಿನಲ್ಲಿಯೇ ಶಿಕ್ಷಣದ ಮಹತ್ವದ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯು ಉತ್ತಮ ರೀತಿಯಲ್ಲಿ ನೆರವೇರಿದೆ.
ಮುಂದಿನ ವ್ಯಾಸಂಗಕ್ಕೆ ಅತ್ಯಮೂಲ್ಯ ಸಮಯವನ್ನು ವ್ಯರ್ಥಗೊಳಿಸದಂತೆ ತಡೆಗಟ್ಟುವುದು ಮುಂದಿನ ಮಹತ್ವದ ಹೆಜ್ಜೆಯಾಗಿದೆ. ಆದ್ದರಿಂದ ಎಸ್.ಎಸ್.ಎಲ್.ಸಿ ಮುಗಿಸಿ, ಪ್ರಥಮ ಪಿಯುಸಿಗೆ ಪಾದಾರ್ಪಣೆಗೊಳ್ಳಲಿರುವ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಮೂಲಕ ಶಿಕ್ಷಣವನ್ನು ಜುಲೈ 12 ಆದಿತ್ಯವಾರದಿಂದ ಪ್ರಾರಂಭಿಸುವುದಾಗಿ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ) ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ಶಿಕ್ಷಣ
ಸಂಸ್ಥೆಯು ನಿರ್ಧರಿಸಿದೆ.
2020-21ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ((PCMB/PCMC& PCMS)) ಮತ್ತು Commerce ತರಗತಿಗಳು ಭಾಷ ವಿಷಯಗಳಾದ ಕನ್ನಡ ಹಾಗೂ ಇಂಗ್ಲೀಷ್‍ಗೆ ತರಗತಿಗಳು ಲಭ್ಯವಿರುತ್ತದೆ.
ವಿದ್ಯಾರ್ಥಿ ತಾನು ಮುಂದೆ ಯಾವ ಕೋರ್ಸನ್ನು ಆಯ್ಕೆಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿರುವಾಗ ಈ ಆನ್‍ಲೈನ್ ಶಿಕ್ಷಣವು ಒಂದು ಉತ್ತಮ ಅವಕಾಶವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2019-20ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿಜ್ಞಾನ ವಾಣಿಜ್ಯ ಕಲಾ ವಿಭಾಗದಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ
ಶಿಕ್ಷಣವನ್ನು ಪಡೆಯುವ ಅವಕಾಶವನ್ನೂ ಕೂಡ ಹೊಂದಿದ್ದು, ಈಗಾಗಲೇ ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ 08251-237143, +919900109490 ಹಾಗೂ +919448536143 ಗೆ
ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‍ನಾಥ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು