Sunday, January 19, 2025
ಸುದ್ದಿ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕಲ್ಮಂಡ್ವಿ ಜಲಪಾತದಲ್ಲಿ ಸೆಲ್ಪಿ ಹುಚ್ಚಿಗೆ ಐವರು ಬಲಿ! – ಕಹಳೆ ನ್ಯೂಸ್

ಪಾಲ್ಘರ್: ಸೆಲ್ಫಿ ಕ್ರೇಜ್ ಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವಾಹರ್ ಪ್ರದೇಶದ ಜಲಪಾತದಲ್ಲಿ ಮುಳುಗಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ.

ಲಾಕ್​​​​ಡೌನ್ ನಡುವೆಯೂ 13 ಜನರ ಗುಂಪು ಜವಾಹರ್ ಪಟ್ಟಣದ ಬಳಿಯ ಕಲ್ಮಂಡ್ವಿ ಜಲಪಾತಕ್ಕೆ ಹೋಗಿದ್ದರು. ಅವರಲ್ಲಿ ಇಬ್ಬರು ಸೆಲ್ಫಿ ತೆಗೆಯಲು ಮುಂದಾದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನೂ ಮೂವರು ನೀರಿಗೆ ಧುಮುಕಿದ್ದು, ಐವರೂ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರನ್ನು ನಿಮೇಶ್ ನರೇಂದ್ರ ಪಟೇಲ್ (30), ಜೈ ಅತುಲ್ ಭೋಯಿರ್ (21), ಪ್ರಥಮೇಶ್ ಪ್ರಕಾಶ್ ಚವಾಣ್ (18), ದೇವೇಂದ್ರ ಗಂಗಾಧರ್ ವಾಘ್ (24) ಮತ್ತು ದೇವೇಂದ್ರ ಫಾಲ್ತಂಕರ್ (21) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿ ಮೃತ ದೇಹಗಳನ್ನು ಮೇಲೆತ್ತುವ ಕಾರ್ಯ ಮಾಡಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ.