Sunday, January 19, 2025
ದಕ್ಷಿಣ ಕನ್ನಡಪುತ್ತೂರು

Breaking News : ಶಾಂತಿಗೋಡಿನ 15 ವರ್ಷದ ಬಾಲಕಿ, ಬಲ್ಯದ ನರ್ಸ್‌ ಸಹಿತ ಪುತ್ತೂರು ತಾಲೂಕಿನಲ್ಲಿ 4 ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಇಂದು ಪುತ್ತೂರು ತಾಲೂಕಿನಲ್ಲಿ 4 ಕೊರೋನಾ ದೃಢಪಟ್ಟ ಕುರಿತು ವರದಿಯಾಗಿದೆ.

ವಿದೇಶದಿಂದ ಬಂದು ಮಂಗಳೂರು ಖಾಸಗಿ ಹೊಟೇಲ್‌ವೊಂದರಲ್ಲಿ ಕ್ವಾರಂಟೈನ್ ಆಗಿರುವ ಇಚಿಲಂಪಾಡಿಯ ಸುಮಾರು 27 ವರ್ಷದ ಯುವಕ, ಮರೀಲ್ ಕ್ಯಾಂಪ್ಕೋ ವಸತಿ ಗೃಹದ ನಿವಾಸಿ 35 ವರ್ಷದ ಗೃಹಿಣಿ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಬಲ್ಯ ಹೊಸ್ಮಠದ 22 ವರ್ಷದ ಯುವತಿ ಮತ್ತು ಶಾಂತಿಗೋಡು ನಿವಾಸಿ 15 ವರ್ಷದ ಬಾಲಕಿಗೆ ಕೊರೋನಾ ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ದೃಢಪಟ್ಟ ಇಚಿಲಂಪಾಡಿಯ ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಲ್ಯ ಹೊಸ್ಮಠದ ಯುವತಿ, ಶಾಂತಿಗೋಡು ನಿವಾಸಿ ಬಾಲಕಿ ಮತ್ತು ಮರೀಲ್ ಕ್ಯಾಂಪ್ಕೋ ವಸತಿ ಗೃಹದಲ್ಲಿರುವ ಗೃಹಿಣಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು